ADVERTISEMENT

ಎಲ್ಲರೂ ಆರೋಗ್ಯ ಕಾರ್ಡ್‌ ಪಡೆಯಿರಿ: ಬಾಲಪ್ಪ ನಾಯಕ

​ಪ್ರಜಾವಾಣಿ ವಾರ್ತೆ
Published 9 ಜನವರಿ 2024, 15:52 IST
Last Updated 9 ಜನವರಿ 2024, 15:52 IST
ಕವಿತಾಳ ಸಮೀಪದ ಗಂಗಾನಗರ ಕ್ಯಾಂಪ್‌ನಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಆಯುಷ್ಮಾನ್‌ ಭಾರತ ಆರೋಗ್ಯ ಕಾರ್ಡ್‌ ಕುರಿತು ಜಾಗೃತಿ ಮೂಡಿಸಿದರು
ಕವಿತಾಳ ಸಮೀಪದ ಗಂಗಾನಗರ ಕ್ಯಾಂಪ್‌ನಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಆಯುಷ್ಮಾನ್‌ ಭಾರತ ಆರೋಗ್ಯ ಕಾರ್ಡ್‌ ಕುರಿತು ಜಾಗೃತಿ ಮೂಡಿಸಿದರು   

ಕವಿತಾಳ: ‘ಆಯುಷ್ಮಾನ್‌ ಭಾರತ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯಡಿ ಪ್ರತಿಯೊಬ್ಬರೂ ನೋಂದಾಯಿಸಿಕೊಂಡು ಕಾರ್ಡ್‌ ಪಡೆಯಬೇಕು’ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು, ಸಮುದಾಯ ಆರೋಗ್ಯ ಕೇಂದ್ರ ಕವಿತಾಳ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿರವಾರ ವತಿಯಿಂದ ಸಮೀಪದ ಗಂಗಾನಗರ ಕ್ಯಾಂಪ್‌ನಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಸೇವೆಗಳ ಕುರಿತ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.

‘ಯೋಜನೆಯಡಿ ಕಾರ್ಡ್‌ ಹೊಂದಿದ ಬಿಪಿಎಲ್ ಕುಟುಂಬಕ್ಕೆ ₹5 ಲಕ್ಷ, ಎಪಿಎಲ್‌ ಕಾರ್ಡ್‌ ಹೊಂದಿದ ಕುಟುಂಬಕ್ಕೆ ₹1.5 ಲಕ್ಷದ ವರೆಗೂ ಉಚಿತ ಆರೋಗ್ಯ ಸೇವೆಗಳು ಸಿಗುತ್ತವೆ. ಮೊಬೈಲ್‌ ಪ್ಲೇ ಸ್ಟೋರ್‌ನಲ್ಲಿ ಆಯುಷ್ಮಾನ್ ಆಪ್‌ ಡೌನಲೋಡ್‌ ಮಾಡಿಕೊಂಡು ನೋಂದಾಯಿಸಿಕೊಳ್ಳಲೂ ಅವಕಾಶವಿದೆ’ ಎಂದರು.

ADVERTISEMENT

ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಸುಮಿತ್ರಾ, ಮತ್ತು ಸಮುದಾಯ ಆರೋಗ್ಯ ಅಧಿಕಾರಿ ರೇಣುಕಾ ಮತ್ತಿತರರು ಉಪಸ್ಥಿತರಿದದರು.

ಅಂದಾಜು 50 ಜನರಿಗೆ ಸ್ಥಳದಲಿಯೇ ನೋಂದಣಿ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.