ADVERTISEMENT

ತುರ್ವಿಹಾಳ: ಬಸವಣ್ಣ, ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 11 ಮೇ 2024, 6:18 IST
Last Updated 11 ಮೇ 2024, 6:18 IST
ಚಿತ್ರ ಶೀರ್ಷಿಕೆ : ತುರ್ವಿಹಾಳ  ಪಟ್ಟಣದಲ್ಲಿ ಶುಕ್ರವಾರ ಜಗಜ್ಯೋತಿ ಬಸವೇಶ್ವರರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ  ಅವರ ಜಯಂತಿಯನ್ನು ಆಚರಿಸಲಾಯಿತು
ಚಿತ್ರ ಶೀರ್ಷಿಕೆ : ತುರ್ವಿಹಾಳ  ಪಟ್ಟಣದಲ್ಲಿ ಶುಕ್ರವಾರ ಜಗಜ್ಯೋತಿ ಬಸವೇಶ್ವರರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ  ಅವರ ಜಯಂತಿಯನ್ನು ಆಚರಿಸಲಾಯಿತು   

ತುರ್ವಿಹಾಳ: ಈಗಿನ ಸಂಸತ್ತಿನ ಮಾದರಿಯನ್ನು 12 ಶತಮಾನದಲ್ಲಿಯೇ ಯೋಚಿಸಿ ಅನುಭವ ಮಂಟಪ ಕಾರ್ಯರೂಪಕ್ಕೆ ತಂದ ದಾರ್ಶನಿಕ ಬಸವಣ್ಣ ಎಂದು ಶಾಸಕ ಆರ್. ಬಸನಗೌಡ ತುರ್ವಿಹಾಳ ಅವರು ಹೇಳಿದರು.

ಸ್ಥಳೀಯ ಶಂಕ್ರಲಿಂಗೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಗಜ್ಯೋತಿ ಬಸವೇಶ್ವರರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಸವಣ್ಣನವರು ತಮ್ಮ ವಚನಗಳಿಂದಲೇ ಜಗತ್ತಿಗೆ ಪ್ರಸಿದ್ಧಿ ಯಾದ ಮಹಾಜ್ಞಾನಿ ನಮ್ಮ ನಾಡಿನಲ್ಲಿ ಜನಿಸಿರುವುದು ನಮ್ಮೆಲ್ಲರ ಭಾಗ್ಯ ಎಂದರು. ಬಸವೇಶ್ವರರ ಹಾಗೂ ಹೇಮರೆಡ್ಡಿ ಮಲ್ಲಮ್ಮಅವರ ಭಾವಚಿತ್ರ ಮೆರವಣಿಗೆ ನಡೆಯಿತು

ADVERTISEMENT

ಅಮರಗುಂಡಯ್ಯ ತಾತ ಮಾತನಾಡಿ, ವಚನಗಳ ಮೂಲಕವೇ ಜಾತಿ ಅಸಮಾನತೆ ವಿರುದ್ಧ ದನಿ ಎತ್ತಿದ ಮಹಾನ್ ಪುರುಷ. ಇವರು ತಮ್ಮ ಕಾಲದಲ್ಲಿಯೇ ಮಹಿಳೆಯರಿಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನ ದೊರೆಯುವಂತೆ ಮಾಡಿದ್ದಾರೆ ಎಂದರು.

ಮಾದಯ್ಯ ಗುರುವಿನ್, ಗುಂಡಯ್ಯ ತಾತ, ಚಿದಾನಂದಯ್ಯ ತಾತ ಮಲ್ಲನಗೌಡ ದೇವರಮನೆ, ಪಾರೂಕ್ ಸಾಬ್, ಉಮರ್ ಸಾಬ್, ಆರ್, ಶಿವನಗೌಡ, ಶರಣಬಸವ ರಡ್ಡೆರ್, ಶರಣಬಸವ ಗಡೇದ್, ಸಾಮಿ ಸಾಬ್ ಚೌದ್ರಿ, ಸಿದ್ದೇಶ ಗುರಿಕಾರ, ಬಾಪುಗೌಡ ದೇವರ ಮನೆ, ರಾಜಶೇಖರ ಗಡೆದ್, ಮಲ್ಲಪ್ಪ ತೆಗ್ಗಿಹಾಳ, ಕರಿಲಿಂಗಪ್ಪ ಹಳ್ಳಿ ಅಭಿಗೌಡ, ಭೀಮದಾಸ ದಾಸರ್, ಶಿವಪುತ್ರಪ್ಪ ಕೆಂಗೇರಿ, ಪ್ರಕಾಶ ಈಳಿಗೇರ್, ಕರಿಯಪ್ಪ ಭಂಗಿ, ರಮೇಶ ಕರಡೋಣಿ ಇದ್ದರು.

ಚಿತ್ರ ಶೀರ್ಷಿಕೆ : ತುರ್ವಿಹಾಳ  ಪಟ್ಟಣದಲ್ಲಿ ಶುಕ್ರವಾರ ಜಗಜ್ಯೋತಿ ಬಸವೇಶ್ವರರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ  ಅವರ ಜಯಂತಿಯನ್ನು ಆಚರಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.