ಬಾಗಲವಾಡ (ಕವಿತಾಳ): ‘ನಾಗರಕಲ್ಲಿಗೆ ಹಾಲನೆರೆಯುವ ಬದಲಿಗೆ ಹಸಿದ ಮಕ್ಕಳಿಗೆ ಹಾಲು ನೀಡುವ ಮೂಲಕ ನಾಗರ ಪಂಚಮಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬೇಕಿದೆ’ ಎಂದು ಪ್ರಬುದ್ಧ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಗಂಗಾಧರ ಬಾಗಲವಾಡ ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ ) ತಾಲ್ಲೂಕು ಘಟಕ ಮತ್ತು ಪ್ರಬುದ್ಧ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಿರವಾರ ತಾಲ್ಲೂಕಿನ ಬಾಗಲವಾಡ ಗ್ರಾಮದ ಸರ್ಕಾರಿ ಮಾದರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನಾಗರ ಪಂಚಮಿ ಬದಲಿಗೆ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಕ ಮಲ್ಲಿಕಾರ್ಜುನ, ಟ್ರಸ್ಟ್‌ನ ಉಪಾಧ್ಯಕ್ಷ ಮೌನೇಶ ಕೋರಿ ಮತ್ತಿತರರು ಮಾತನಾಡಿದರು.
ಮಕ್ಕಳಿಗೆ ಹಾಲು, ಬಾಳೆಹಣ್ಣು ಮತ್ತು ಬ್ರೆಡ್ ವಿತರಿಸಲಾಯಿತು
ಟ್ರಸ್ಟ್‌ನ ಪದಾಧಿಕಾರಿಗಳಾದ ನಾಗರಾಜ ಹಿಂದಿನಮನಿ, ಜಗದೀಶ್ ಸಾಲಮನಿ, ವಿಶ್ವನಾಥ ಸಾಲಮನಿ, ಹುಚ್ಚರೆಡ್ಡಿ ಭವಾನಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಬಸವರಾಜ, ಮುಖ್ಯ ಶಿಕ್ಷಕ ಹನುಮಂತಪ್ಪ ನಾಯ್ಕರ್, ಎಸ್‌ಡಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಮುಖಂಡರಾದ ಮಲ್ಲನಗೌಡ ಪಾಟೀಲ್, ಯಂಕೋಬ ನಾಯಕ, ನಾಗರಾಜಪ್ಪ ಧಣಿ, ಭೀರಪ್ಪ ಸಾಹುಕಾರ, ಅಮರೇಶ ನಾಯಕ, ಗುರಪ್ಪ ಸಾಹುಕಾರ, ಅಮರೇಶ ದೇಸಾಯಿ, ಚಂದ್ರು ಕಾವಲಿ, ಅಮರೇಶ ಛಲವಾದಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.