ರಾಯಚೂರು: ರಾಯಚೂರು ನಗರದ ಸಿದ್ರಾಂಪುರು ಕರೆಯಲ್ಲಿ ಕುದುರೆಯ ಮೈ ತೊಳೆಯಲು ಹೋಗಿ ನೀರುಪಾಲಾಗಿದ್ದ ಜಹೀರಬಾದ್ ಯುವಕ ಅಜೀಂ(23) ಗುರುವಾರ ಶವ ಪತ್ತೆಯಾಗಿದೆ.
ಬುಧವಾರ ನೀರಿನಲ್ಲಿ ಮುಳುಗಿದ್ದ ಅಜೀಂ, ಕುದುರೆ ದಡ ಸೇರಿದರೂ ಆತನ ಪತ್ತೆ ಯಾಗಿರಲಿಲ್ಲ. ಪೊಲೀಸರು ಹಾಗೂ ಅಗ್ನಿಶಾಮಕ ದಳ ಇಡೀ ದಿನ ಶೋಧ ಕಾರ್ಯ ನಡೆಸಿದ್ದರು. ಬೆಳಿಗ್ಗೆ ಶವ ಪತ್ತೆಯಾಗಿದ್ದು, ರಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.