ADVERTISEMENT

ಶಕ್ತಿನಗರ: ಅಂಬೇಡ್ಕರ್, ಬಾಬೂಜಿ ಜಯಂತಿ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2022, 13:06 IST
Last Updated 29 ಏಪ್ರಿಲ್ 2022, 13:06 IST
ಶಕ್ತಿನಗರದಲ್ಲಿ ಗುರುವಾರ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಂ ಅವರ ಜಯಮತಿ ಕಾರ್ಯಕ್ರಮವನ್ನು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರನಾಯಕ ಉದ್ಘಾಟಿಸಿದರು
ಶಕ್ತಿನಗರದಲ್ಲಿ ಗುರುವಾರ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಂ ಅವರ ಜಯಮತಿ ಕಾರ್ಯಕ್ರಮವನ್ನು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರನಾಯಕ ಉದ್ಘಾಟಿಸಿದರು   

ಶಕ್ತಿನಗರ: ಶೋಷಿತರು ದಲಿತರು ಬಡವರು ಅಕ್ಷರದ ಜ್ಞಾನ ಹೊಂದುವದಿಲ್ಲವೋ ಅಲ್ಲಿವರೆಗೆ ಅಭಿವೃದ್ಧಿ ಹೊಂದಲು ಅಸಾಧ್ಯ ಎಂಬುದು ಡಾ.ಬಿ.ಆರ್.ಅಂಬೇಡ್ಕರ್ ಅರಿತುಕೊಂಡಿದರು ಎಂದು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರನಾಯಕ ಹೇಳಿದರು.

ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ರಾಯಚೂರು ಶಾಖೋತ್ಪನ್ನ ವಿದ್ಯುತ್ (ಆರ್‌ಟಿಪಿಎಸ್‌) ಸ್ಥಾವರ, ಯರಮರಸ್ ಶಾಖೋತ್ಪನ್ನ ವಿದ್ಯುತ್ (ವೈಟಿಪಿಎಸ್) ಸ್ಥಾವರ, ಕೆಪಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಸಂಘ ಸಹಯೋಗದಲ್ಲಿ ಶಕ್ತಿನಗರದ ಡಾ.ಬಿ. ಅಂಬೇಡ್ಕರ್ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಂ ಅವರ ಜಯಂತೋತ್ಸವದ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.

ಅಂಬೇಡ್ಕರ್ ಅವರು ಕೇವಲ ದಲಿತರಿಗಾಗಿ ಸಂವಿಧಾನ ರಚಿಸಲಿಲ್ಲ. ಎಲ್ಲಾ ಸಮಾಜದ ಬಡವರ ಮಹಿಳೆಯರ ಶೋಷಿತರ ಪರವಾಗಿ ಹೋರಾಡಿದ ಮಹಾನ್ ಚೇತನ, ತಮಗಾದ ಅವಮಾನ ಅನ್ಯಾಯ ಎಲ್ಲವನ್ನು ಸಹಿಸಿಕೊಂಡು, ಸಂವಿಧಾನವನ್ನು ರಚಿಸಿ ನಮಗೆ ಗೌರವಯುತವಾಗಿ ಬದುಕುವ ಹಕ್ಕನ್ನು ಕೊಟ್ಟಿದ್ದಾರೆ. ನಾವೆಲ್ಲರೂ ಸಂವಿಧಾನದಡಿಯಲ್ಲಿ ಹಾಕಿ ಕೊಟ್ಟ ಮಾರ್ಗದಲ್ಲಿ ಮುಂದೆ ನಡೆಯಬೇಕು. ನಮಗೆ ಸಂವಿಧಾನವೇ ಮಹಾಗ್ರಂಥ ಎಂದರು.

ADVERTISEMENT

ಡಾ.ಬಾಬು ಜಗಜೀವನ್ ರಾಮ್ ಅವರು, ‘ಕೃಷಿ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿ ಭಾರತೀಯರೆಲ್ಲರಿಗೂ ಹಸಿವನ್ನು ನೀಗಿಸಿ ಹಸಿರು ಕ್ರಾಂತಿ ಹರಿಕಾರ ಎನಿಸಿಕೊಂಡರು. ಇಬ್ಬರು ಮಹಾನ್ ಚೇತನರು ಕೇವಲ ದಲಿತರಿಗಷ್ಟೇ ಅಲ್ಲ. ಇಡೀ ಮಾನವ ಕುಲದ ಉದ್ಧಾರಕ್ಕೆ ಕೆಲಸ ಮಾಡಿದ ಮಹನೀಯರು’ ಎಂದರು.

2021–22ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ವಿದ್ಯಾರ್ಥಿಗಳಿಗೆ ಮತ್ತು ನಿಗಮದಿಂದ ನಿವೃತ್ತರಾದ ಉದ್ಯೋಗಿಗಳನ್ನು ಸನ್ಮಾನಿಸಲಾಯಿತು. ಭೀಮಯ್ಯನಾಯಕ ಸ್ವಾಗತಿಸಿದರು. ಟಿ.ಸೂಗಪ್ಪ ವಂದಿಸಿದರು. ರೇಷ್ಮ ಮತ್ತು ರಾಮಪ್ಪ ಅವರು ನಿರೂಪಿಸಿದರು. ಲಕ್ಷ್ಮಿ ಕಾಂತ್ ಹೊಸೂರ್ ಅವರ ತಂಡ ಕ್ರಾಂತಿಗೀತೆಗಳನ್ನು ಹಾಡಿದರು.

ಆರ್‌ಟಿಪಿಎಸ್ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಶಶಿಕಾಂತ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ವಿದ್ಯುತ್ ನಿಗಮದ ತಾಂತ್ರಿಕ ನಿರ್ದೇಶಕ ನರೇಂದ್ರಕುಮಾರ, ವೈಟಿಪಿಎಸ್‌ ಯೋಜನಾ ಪ್ರದೇಶದ ಮುಖ್ಯಸ್ಥ ಬಿ.ಟಿ. ಆಂಜನೇಯ ನಾಯ್ಕ್, ಪ್ರಮುಖರಾದ ಎಲ್.ಪ್ರಭುಸ್ವಾಮಿ, ಶ್ರೀಕೃಷ್ಣ ಮೂರ್ತಿ,ಸಿದ್ಧಗಂಗಯ್ಯ, ಡಾ.ಶಂಕರ ಯಾದವಾಡ, ಎಂ.ಆರ್.ಜಯಪ್ರಕಾಶ, ಬಿ.ನಿಜೇಂದ್ರ, ಅಮರೇಶ, ಟಿ.ಸೂಗಪ್ಪ,ಭೀಮಯ್ಯ ನಾಯಕ ಸೇರಿದಂತೆ ವಿವಿಧ ನೌಕರರ ಸಂಘದ ಪದಾಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.