ರಾಯಚೂರು: ‘ಬಸವಣ್ಣನ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದು ಅದನ್ನು ಎಲ್ಲರೂ ಅರಿಯಬೇಕು. ಜನರು ಆಚಾರ, ವಿಚಾರ ಮರೆತು ನಡೆಯುತ್ತಿದ್ದಾರೆ. ರೇಣುಕಾಚಾರ್ಯರು ಹೇಳಿದ ತತ್ವ, ಸಿದ್ಧಾಂತಗಳು ಹಾಗೂ 12ನೇ ಶತಮಾನದ ಶರಣರು ಹೇಳಿದ ವಿಚಾರಧಾರೆಗಳು ಬೇರೆಯಲ್ಲ’ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಪಂಚಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ರಾಚೋಟಿವೀರ ಶಿವಾಚಾರ್ಯ ಮಂಗಳ ಭವನವನ್ನು ಭಾನುವಾರ ಉದ್ಘಾಟಿಸಿ ಆಶೀವರ್ಚನ ನೀಡಿದರು.
‘ವೀರಶೈವ ಧರ್ಮದ ಒಳಪಂಗಡಗಳು ಬೆಳೆಯಬೇಕು ಎನ್ನುವ ಅಪೇಕ್ಷೆ ತಪ್ಪಲ್ಲ. ಧರ್ಮದ ತಳಹದಿ ಮೇಲೆ ಒಳಪಂಗಡಗಳನ್ನು ಸಂಘಟಿಸುವ ಕೆಲಸವಾಗಬೇಕು. ಇಂದು ಜನರು ಜಾತಿಗೆ ಕೊಡುವಷ್ಟು ಪ್ರಾಮುಖ್ಯತೆ ಧರ್ಮಕ್ಕೆ ಕೊಡುತ್ತಿಲ್ಲ. ಮೂಲ ಧರ್ಮಕ್ಕೆ ಕೊಡಲಿ ಪೆಟ್ಟು ಕೊಡುವ ಕೆಲಸ ಮಾಡಬಾರದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.