ADVERTISEMENT

‘ದೇಶವನ್ನು ಇಕ್ಕಟ್ಟಿಗೆ ಸಿಲುಕಿಸಿದ ಕೇಂದ್ರ’

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 14:00 IST
Last Updated 11 ಫೆಬ್ರುವರಿ 2020, 14:00 IST

ರಾಯಚೂರ: ಕೇಂದ್ರ ಸರ್ಕಾರ ಎನ್ಆರ್‌ಸಿ, ಸಿಎಎ ಕಾಯ್ದೆ ಮೂಲಕ ಜನರ ಭಾವನೆ ಜೊತೆ ಚೆಲ್ಲಾಟವಾಡುತ್ತಿದ್ದು ದೇಶವನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ಬಿಎಸ್‌ಪಿ ಜಿಲ್ಲಾ ಸಂಯೋಜಕ ಎಂ.ಆರ್.ಬೇರಿಅರೋಪಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಾದ್ಯಂತ ನಡೆಯುತ್ತಿರುವ ಹೋರಾಟದ ಭಾಗವಾಗಿ ರಾಯಚೂರಿನ ಟಿಪ್ಪುಸುಲ್ತಾನ್‌ ಗಾರ್ಡನ್‌ ಹೋರಾಟವನ್ನು ಬೆಂಬಲಿಸಲಾಗುವುದು ಎಂದು ತಿಳಿಸಿದರು.

ಪೌರತ್ವ ಕಾಯ್ದೆಗಳು ಜಾರಿಗೆ ತರುವ ಮೂಲಕ ಪ್ರಧಾನಿ ಮೋದಿ ಅವರು ಆಧುನಿಕ ದುಶ್ಯಾಸನನಂತೆ ವರ್ತಿಸುತಿದ್ದು ಈ ಕಯ್ದೆ ದುಶ್ಶಾಸನಾವಾಗಿದ್ದು ದೇಶದ ಮಹಿಳೆಯರಿಗೆ, ಆದಿವಾಸಿ, ಶೋಷಿತ ಸಮುದಾಯದ ಮೇಲೆ ದಬ್ಬಾಳಿಕೆ ನಡೆಸಲು ಮುಂದಾಗಿದ್ದಾರೆ. ಈ ಕಾಯ್ದೆಗಳುಆತಂಕ ಸೃಷ್ಟಿಸಿದ್ದು ಇದು ಸಂವಿಧಾನಕ್ಕೆ ಧಕ್ಕೆ ತರುವಂತಿದೆ. ಬಿಜೆಪಿ ಸರ್ಕಾರ ಧರ್ಮಾಧಾರಿತ ಕಾಯ್ದೆ ವಿರುದ್ಧ ಸಿಡಿದೇಳುವ ಪ್ರಸಂಗ ಎದುರಾಗಿದೆ ಎಂದರು.

ADVERTISEMENT

ಪ್ರಧಾನಿ ಮೋದಿ ಅಧಿಕಾರಾವಧಿಯಲ್ಲಿ ಸಮಾಜದಲ್ಲಿ ಅತ್ಯಾಚಾರ, ಆತ್ಮಹತ್ಯೆ, ನಿರುದ್ಯೋಗ, ಮಕ್ಕಳ ಸಾವು ಪ್ರಕರಣ, ಅಪೌಷ್ಟಿಕತೆ ಹೆಚ್ಚಳ ದಂತಹ ಸಮಸ್ಯೆಗಳು ತಾಂಡವವಾಡುತ್ತಿದ್ದು, ವಿಶ್ವದಲ್ಲಿ ಭಾರತ ದೇಶ ಶೇ 10 ರಷ್ಟು ಸ್ಥಾನ ಹಿಂದೆ ಹೋಗುವಂತಾಗಿದೆ. ಇಂತಹ ಜ್ವಲಂತ ಸಮಸ್ಯೆಗಳತ್ತ ಗಮನ ಹರಿಸದ ಸರ್ಕಾರ ಕಾರ್ಮಿಕ, ರೈತ, ಮಹಿಳಾ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡಲು ಹೊರಟಿದೆಎಂದು ದೂರಿದರು.

ರಾಯಚೂರು ನಗರದಲ್ಲಿಯೂ ಕಾಯ್ದೆ ಹಿಂಪಡೆಯಲು ಆಗ್ರಹಿಸಿ ನಡೆಯುತ್ತಿರುವ ಈ ಹೋರಾಟಕ್ಕೆ ಬಿಎಸ್‌ಪಿ ಬೆಂಬಲ ಸೂಚಿಸಿ ಫೆಬ್ರುವರಿ 14 ರಿಂದ ಅನಿರ್ಧಿಷ್ಠಾವಧಿ ಧರಣಿಯಲ್ಲಿ ಭಾಗವಹಿಸಲು ತೀರ್ಮಾನಿಸಿದೆ. ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು ಸಂಘಟನೆಗಳೂ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು

ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಭಂಡಾರಿ, ಜಿಲ್ಲಾ ಸಂಯೋಜಕ ಹನುಮಂತಪ್ಪ ವಕೀಲರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೈ ಭೀಮ್ ವಲ್ಲಭ, ಅಂಜಿನಯ್ಯ ವಡ್ವಾಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.