ADVERTISEMENT

ಎಲ್‌ಕೆಜಿ, ಯುಕೆಜಿ ಆರಂಭ ವಿರೋಧಿಸಿ ಸಿಐಟಿಯು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 15:37 IST
Last Updated 19 ಜೂನ್ 2024, 15:37 IST
ದೇವದುರ್ಗದ ಶಾಸಕರ ಕಚೇರಿ ಎದುರು ಸಿಐಟಿಯು ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮನವಿ ಸ್ವೀಕರಿಸಿದ ಶಾಸಕಿ ಕರೆಮ್ಮ ಜಿ.ನಾಯಕ ಮಾತನಾಡಿದರು
ದೇವದುರ್ಗದ ಶಾಸಕರ ಕಚೇರಿ ಎದುರು ಸಿಐಟಿಯು ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮನವಿ ಸ್ವೀಕರಿಸಿದ ಶಾಸಕಿ ಕರೆಮ್ಮ ಜಿ.ನಾಯಕ ಮಾತನಾಡಿದರು   

ದೇವದುರ್ಗ: ‘ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಪ್ರಾರಂಭದಿಂದ ಐಸಿಡಿಸಿ ಕಾರ್ಯಕ್ರಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಜತೆಗೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರು ದುಷ್ಪರಿಣಾಮ ಎದುರಿಸಬೇಕಾಗುತ್ತದೆ. ಸರ್ಕಾರ ಈ ಆದೇಶವನ್ನು ಪರಿಷ್ಕರಿಸಬೇಕು’ ಎಂದು ಸಿಐಟಿಯು ಮುಖಂಡ ಗಿರಿಯಪ್ಪ ಪೂಜಾರಿ ಹೇಳಿದರು.

ಪಟ್ಟಣದ ಶಾಸಕರ ಕಚೇರಿ ಎದುರು ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಪ್ರಾರಂಭ ವಿರೋಧಿಸಿ ಸಿಐಟಿಯು ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿರು.

ಸರ್ಕಾರ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‌ಕೆಜಿ ಮತ್ತು ಯುಕೆಜಿ ಪ್ರಾರಂಭಿಸಿಸುವಂತೆ ಅಧಿವೇಶನದಲ್ಲಿ ಮಹಿಳೆಯರ ಪರ ಧ್ವನಿಯಾಗುವಂತೆ ಶಾಸಕಿ ಕರೆಮ್ಮ ಜಿ.ನಾಯಕ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ADVERTISEMENT

ರಂಗಮ್ಮ ಅನ್ವರ, ರಮಾದೇವಿ ಮಾತನಾಡಿದರು. ಬಸಲಿಂಗಮ್ಮ, ಚಂದ್ರಕಲಾ, ಲೀಲಾವತಿ, ಶಕೀಲಾ, ಹನುಮಂತಿ, ಸುಜಾತಾ ನಾಯಕ, ರೇಣುಕಾ ಬೊಮ್ಮನಾಳರ್, ಖುಷಿದ ಬೇಗಂ ಕರಿಗುಡ್ಡ, ರಂಗಮ್ಮ, ಸುರೇಖಾ, ರಾಧಿಕಾ, ಜಯಲಕ್ಷ್ಮಿ, ಕೌಸರ್ ಬೇಗಂ, ಪಾಪಮ್ಮ ನಿಲೋಗಲ್, ಗೋದಾವರಿ, ಹೈದರಬಿ ಜಾಲಹಳ್ಳಿ, ಮಹಾಲಕ್ಷ್ಮಿ ಭಾಗವಹಿಸಿದ್ದರು.

ನೂತನ ಎಲ್‌ಕೆಜಿ ಮತ್ತು ಯುಕೆಜಿಯಿಂದ ಅಂಗನವಾಡಿ ಕೇಂದ್ರಗಳು ದುರ್ಬಲಗೊಳ್ಳಲಿವೆ. ವೈಜ್ಞಾನಿಕವಾಗಿ ಪ್ರಾರಂಭಿಸುವಂತೆ ಸದನದಲ್ಲಿ ಪ್ರಸ್ತಾಪಿಸುವೆ.

ಕರೆಮ್ಮ ಜಿ.ನಾಯಕ, ಶಾಸಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.