ರಾಯಚೂರು: ತುಂಗಭದ್ರಾ ಎಡದಂಡೆ ನೀರಾವರಿ ವಲಯ ಹಂಗಾಮಿ ಕಾರ್ಮಿಕರ ಸಂಘ ಹಾಗೂ ವೈಟಿಪಿಎಸ್ ಕಾರ್ಮಿಕರ ಸಂಘದ ಸದಸ್ಯರು ಸಿಎಂ ತೆರಳುತ್ತಿದ್ದ ಬಸ್‌ಗೆ ಅಡ್ಡಿಯನ್ನುಂಟು ಮಾಡಿ ಪ್ರವಾಸಿ ಮಂದಿರ ಬಳಿ ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು.
14 ತಿಂಗಳು ಬಾಕಿ ವೇತನ ಮತ್ತು ವಜಾಗೊಳಿಸಿದ 410 ಕಾರ್ಮಿಕರ ಪುನರ್ ನೇಮಕಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಹೋರಾಟಗಾರರಿಂದ ಮುಖ್ಯಮಂತ್ರಿ ಮನವಿ ಸ್ವೀಕರಿಸಿದ ನಂತರವೂ ಹೋರಾಟಗಾರರು ಸಮಾಧಾನವಾಗಲಿಲ್ಲ, ಮತ್ತೆ ಅಡ್ಡಿಪಡಿಸಿದರು. ಇದರಿಂದ 10 ನಿಮಿಷ ಬಸ್ ನಲ್ಲಿ ಸಿಎಂ ಕಾದು ಕುಳಿತುಕೊಳ್ಳುವಂತಾಯಿತು.
ರಸ್ತೆ ತಡೆ ಮಾಡಿದ ಹೋರಾಟ ಗಾರರನ್ನು ತೆರವುಗೊಳಿಸಲು ಪೊಲೀಸರು ಮತ್ತು ಅಧಿಕಾರಿಗಳು ಹರಸಾಹಸ ಪಟ್ಟರು.
* ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.