ADVERTISEMENT

ಜಾಲಹಳ್ಳಿ: ಅಮೃತ ಸರೋವರದಲ್ಲಿ ಸಂವಿಧಾನ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 16:30 IST
Last Updated 26 ನವೆಂಬರ್ 2024, 16:30 IST
ಜಾಲಹಳ್ಳಿ ಸಮೀಪದ ಪರಪುರ ಕೆಳಗೆ ನಿರ್ಮಿಸಿದ ಅಮೃತ ಸರೋವರದಲ್ಲಿ ಮಂಗಳವಾರ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ನರಸಪ್ಪ ಅವರ ನೇತೃತ್ವದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ‌ಜರುಗಿತು
ಜಾಲಹಳ್ಳಿ ಸಮೀಪದ ಪರಪುರ ಕೆಳಗೆ ನಿರ್ಮಿಸಿದ ಅಮೃತ ಸರೋವರದಲ್ಲಿ ಮಂಗಳವಾರ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ನರಸಪ್ಪ ಅವರ ನೇತೃತ್ವದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ‌ಜರುಗಿತು   

ಜಾಲಹಳ್ಳಿ: ಸಮೀಪದ ಪರಪುರ ಕೆರೆಯ ಕೆಳ ಭಾಗದಲ್ಲಿ ನರೇಗಾ ಯೋಜನೆ ಅಡಿ ನಿರ್ಮಿಸಿದ ಅಮೃತ ಸರೋವರದ ಹತ್ತಿರ ಮಂಗಳವಾರ ಪಿಡಿಒ ನರಸಪ್ಪ ಆಶಾಪುರ ನೇತೃತ್ವದಲ್ಲಿ ಸಂವಿಧಾನ ದಿನ ಆಚರಿಸಲಾಯಿತು. ಕೂಲಿ ಕಾರ್ಮಿಕರಿಗೆ ಸಂವಿಧಾನದ ಪ್ರತಿಜ್ಞಾ ವಿಧಿ ಬೋಧಿಸಿಲಾಯಿತು.

ನಂತರ ಮಾತನಾಡಿ, ‘ಭಾರತ ದೇಶದಲ್ಲಿ ಬಹು ಧರ್ಮೀಯರು ವಾಸವಾಗಿದ್ದು, ಎಲ್ಲರಿಗೂ ಸಾಮಾಜಿಕ ನ್ಯಾಯ ದೊರೆಯಬೇಕೆನ್ನುವ ಆಶಯದೊಂದಿಗೆ ವಿಶ್ವದಲ್ಲಿ ಈ ಮೊದಲು ರಚನೆಯಾಗಿದ್ದ ಬ್ರಿಟಿಷ್, ಫ್ರಾನ್ಸ್‌, ಅಮೆರಿಕ, ಕೆನಡಾ, ಸೋವಿಯತ್ ರಷ್ಯಾ ದೇಶಗಳ ಸಂವಿಧಾನದಿಂದ ಒಂದೊಂದು ಅಂಶಗಳನ್ನು ಪಡೆದು, 60 ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ಭಾರತಕ್ಕೆ ಬೇಕಾದ ಅಂಶಗಳನ್ನು ಸೇರಿಸಿ ಸಂವಿಧಾನ ರಚಿಸಿದರು. ವಿಶ್ವದಲ್ಲಿ ಭಾರತ ಸಂವಿಧಾನವೇ ಅತಿ ದೊಡ್ಡ ಲಿಖಿತ ಸಂವಿಧಾನವಾಗಿದೆ’ ಎಂದು ಹೇಳಿದರು.

ಸಂವಿಧಾನದ ಪೀಠಿಕೆ ಓದುವ ಮೂಲಕ ದಿನ ಆಚರಿಸಲಾಯಿತು. ಗ್ರಾ.ಪಂ. ಸದಸ್ಯರಾದ ತಿಮ್ಮಣ್ಣ ನಾಯಕ, ನರಸಣ್ಣ ನಾಯಕ,  ಶೇಖರಪ್ಪ, ಸಿಬ್ಬಂದಿ ಯಂಕೋಬ ಪಲಕನಮರಡಿ, ಮುದ್ದರಂಗಪ್ಪ ನಾಯಕ, ರಂಗನಾಥ ನಾಯಕ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.