ADVERTISEMENT

ಹಳ್ಳಕ್ಕೆ ಕಲುಷಿತ ನೀರು ಮಿಶ್ರಣ: ಜಲಚರಗಳ ಸಾವು

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 14:20 IST
Last Updated 3 ಜುಲೈ 2024, 14:20 IST
ಕೋಠಾ ಗ್ರಾಮದ ಹತ್ತಿರದ ಹಳ್ಳದಲ್ಲಿ ಕಲುಷಿತ ನೀರು ಮಿಶ್ರಣದಿಂದ‌ ಮೀನುಗಳು ಸತ್ತಿರುವುದು
ಕೋಠಾ ಗ್ರಾಮದ ಹತ್ತಿರದ ಹಳ್ಳದಲ್ಲಿ ಕಲುಷಿತ ನೀರು ಮಿಶ್ರಣದಿಂದ‌ ಮೀನುಗಳು ಸತ್ತಿರುವುದು   

ಹಟ್ಟಿ ಚಿನ್ನದ ಗಣಿ: ಸಮೀಪದ ಕೋಠಾ ಗ್ರಾಮದ ಹಳ್ಳಕ್ಕೆ ಗಣಿ ಕಂಪನಿಯ ಕಲುಷಿತ ನೀರು ಬಿಡಲಾಗುತ್ತಿದ್ದು, ಇದರಿಂದ ಹಳ್ಳದ ಮೀನುಗಳು ಹಾಗೂ ಜಲಚರಗಳು ಸಾಯುತ್ತಿವೆ ಎಂದು ಕೋಠಾ ಗ್ರಾಮದ ಬಸವನಗೌಡ ದಳಪತಿ ಆರೋಪ ಮಾಡಿದ್ದಾರೆ.

ಗಣಿ ಕಂಪನಿಯ ತ್ಯಾಜ್ಯದ ಕಲುಷಿತ ನೀರನ್ನು ಹಳ್ಳಕ್ಕೆ ಬಿಡುತ್ತಿರುವ ಪರಿಣಾಮ ಈ ನೀರನ್ನು ಆಡು, ಆಕಳು ಹಾಗೂ ಜಿಂಕೆ, ನವಿಲು ಸೇರಿದಂತೆ ಪ್ರಾಣಿ ಪಕ್ಷಿಗಳು ಕುಡಿದು ಸಾವನಪ್ಪುತ್ತಿವೆ.

ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಇತ್ತ ಕಡೆ ಗಮನಹರಿಸುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಜಲಚರಗಳು ಹಾಗೂ ವನ್ಯಜೀವಿಗಳು ಸಾವನಪ್ಪುತ್ತಿವೆ. ಇದೇ ನೀರು ಕುಡಿಯುವ ನೀರಿನಲ್ಲಿ ಮಿಶ್ರಣವಾದರೆ ಹೊಣೆ ಯಾರು? ಎಂದು ಪ್ರಶ್ನಿಸಿರುವ ಅವರು, ಸಂಬಂಧಪಟ್ಟ ಅಧಿಕಾರಿಗಳು ಗಣಿ ಕಂಪನಿಯ ತ್ಯಾಜದ ಕಲುಷಿತ ನೀರನ್ನು ಹಳ್ಳಕ್ಕೆ ಬಿಡದಂತೆ ನೋಡಿಕೊಳ್ಳಬೇಕು. ಜಲಚರಗಳ ಸಾವಿಗೆ ಕಾರಣವಾದ ಗಣಿ ಅಧಿಕಾರಿಗಳು ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

ಸಂಬಂಧಪಟ್ಟ ಅಧಿಕಾರಿಗಳು ಸ್ಧಳಕ್ಕ ಭೇಟಿ ನೀಡಿ ಸಮಸ್ಯೆ ಬಹೆಹರಿಸಬೇಕು. ನಿರ್ಲಕ್ಷ್ಯ ಮಾಡಿದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಕೋಠಾ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.