ADVERTISEMENT

ದೇವದುರ್ಗ: ಡೆಂಗಿ ಜಾಗೃತಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2024, 14:19 IST
Last Updated 3 ಆಗಸ್ಟ್ 2024, 14:19 IST
ದೇವದುರ್ಗ ಪಟ್ಟಣದ ಭಗತ್ ಸಿಂಗ್ ವಾರ್ಡಿನಲ್ಲಿ ಆರೋಗ್ಯ ಇಲಾಖೆ ವತಿಯಿಂದ ಜಾಗೃತಿ ಅಭಿಯಾನ ನಡೆಯಿತು
ದೇವದುರ್ಗ ಪಟ್ಟಣದ ಭಗತ್ ಸಿಂಗ್ ವಾರ್ಡಿನಲ್ಲಿ ಆರೋಗ್ಯ ಇಲಾಖೆ ವತಿಯಿಂದ ಜಾಗೃತಿ ಅಭಿಯಾನ ನಡೆಯಿತು   

ದೇವದುರ್ಗ: ಪಟ್ಟಣದ ಭಗತ್ ಸಿಂಗ್ ವಾರ್ಡಿನಲ್ಲಿ ಆರೋಗ್ಯ ಇಲಾಖೆಯಿಂದ ಡೆಂಗಿ ಜಾಗೃತಿ ಅಭಿಯಾನ ನಡೆಯಿತು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಬನದೇಶ್ವರ ಮಾತನಾಡಿ, ಮನೆಯಲ್ಲಿನ ತೊಟ್ಟಿ, ಬ್ಯಾರಲ್‌ನ ನೀರನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಸ್ವಚ್ಛಗೊಳಿಸಬೇಕು. ಮನೆಯ ಸುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಘನತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಿ ಪರಿಸರ ಸ್ವಚ್ಛವಾಗಿಡಬೇಕು. ಸೊಳ್ಳೆಗಳು ಕಚ್ಚದಂತೆ ಮೈ ತುಂಬಾ ಬಟ್ಟೆ ಧರಿಸಬೇಕು. ಮನೆಯ ಸುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳಿ. ನಿಂತ ನೀರಿನಲ್ಲಿ ಈಡಿಸ್ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಹಳೆಯ ಪಾತ್ರೆ, ಮಡಿಕೆ, ಟೈರ್‌, ಬಕೆಟ್, ಪ್ಲಾಸ್ಟಿಕ್ ಕಪ್, ಎಳೆನೀರಿನ ಚಿಪ್ಪು ಮೊದಲಾದವುಗಳಲ್ಲಿ ಸೊಳ್ಳೆ ಉತ್ಪತ್ತಿಯಾಗುತ್ತವೆ. ಈ ವಿಷಯದ ಬಗ್ಗೆ ಸಾಂಘೀಕ ಅರಿವು ಅಗತ್ಯವಾಗಿದೆ. ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿವೆ ಎಂದು ಹೇಳಿದರು.

ಕರ ಪತ್ರಗಳನ್ನು ವಿತರಿಸಿ ಅರಿವು ಮೂಡಿಸಿ ಡೆಂಗಿ ಜ್ವರದ ಲಕ್ಷಣಗಳು ಮುಂಜಾಗ್ರತ ಕ್ರಮಗಳು ಹಾಗೂ ಸ್ವಯಂ ರಕ್ಷಣಾ ವಿಧಾನಗಳ ಕುರಿತು ಮಾಹಿತಿ ನೀಡಿದರು.

ADVERTISEMENT

ಸೀನಿಯರ್ ಎಚ್ಐಒ ಶರಣಬಸಪ್ಪ ಪಾಟೀಲ, ಬಿಎಚ್ಇಒ ಗೀತಮ್ಮ, ತಾಲ್ಲೂಕು ಮಲೇರಿಯಾ ಮೇಲ್ವಿಚಾರಕ ಓಂಕಾರ, ಬಿಸಿಎಂ ಶಾರೋನ್, ಎಚ್ಐಒಗಳಾದ ಈಶಮ್ಮ, ಮೈನುದ್ದಿನ್, ನಾಗರಾಜ, ಆಶಾ ಕಾರ್ಯಕರ್ತೆ ಶಿವಗಂಗಮ್ಮ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.