ADVERTISEMENT

ಮಸ್ಕಿ | ಡೆಂಗಿ ಪ್ರಕರಣ ಹಿನ್ನೆಲೆ: ಪುರಸಭೆಯಿಂದ ಫಾಗಿಂಗ್

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 15:36 IST
Last Updated 5 ಜುಲೈ 2024, 15:36 IST
ಮಸ್ಕಿ ಪಟ್ಟಣದಲ್ಲಿ ಡೆಂಗಿ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ಶುಕ್ರವಾರ ಪುರಸಭೆ ಸಿಬ್ಬಂದಿ ವಿವಿಧೆಡೆ ಔಷಧ ಸಿಂಪಡಣೆ ಮಾಡಿದರು
ಮಸ್ಕಿ ಪಟ್ಟಣದಲ್ಲಿ ಡೆಂಗಿ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ಶುಕ್ರವಾರ ಪುರಸಭೆ ಸಿಬ್ಬಂದಿ ವಿವಿಧೆಡೆ ಔಷಧ ಸಿಂಪಡಣೆ ಮಾಡಿದರು   

ಮಸ್ಕಿ: ಪಟ್ಟಣದಲ್ಲಿ ಡೆಂಗಿ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಪುರಸಭೆ ಆಡಳಿತವು ಪ್ರಕರಣ ಕಂಡು ಬಂದ ಬಡಾವಣೆ ಸೇರಿದಂತೆ ವಿವಿಧೆಡೆ ಫಾಗಿಂಗ್ ಮಾಡತೊಡಗಿದೆ.

ಗಾಂಧಿ ನಗರ, ಕನಕವೃತ್ತ ಬಡಾವಣೆ ಸೇರಿದಂತೆ ಪಟ್ಟಣದ 23 ವಾರ್ಡ್‌ಗಳಲ್ಲಿ ಚರಂಡಿ ಹಾಗೂ ನಿಂತ ನೀರು ಸೇರಿದಂತೆ ಎಲ್ಲೆಡೆ ಫಾಗಿಂಗ್ ಮಾಡುವ ಮೂಲಕ ಡೆಂಗಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ ‘ಪ್ರಜಾವಾಣಿ’ ಗೆ ತಿಳಿಸಿದರು.

ಸಾರ್ವಜನಿಕರು ಮನೆಯ ಮುಂದೆ ಕಸ ಚೆಲ್ಲುವುದು, ಹಸಿ ಕಸ ಹಾಕುವುದು ಬಿಡಬೇಕು. ಮನೆಯ ಮುಂದೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಸೊಳ್ಳೆಗಳು ಹರಡದಂತೆ ಮುಂಜಾಗೃತ ಕ್ರಮ ಕೈಗೊಳ್ಳಬೇಕು. ಮನೆಯ ಕಿಟಕಿಗಳನ್ನು ಮುಚ್ಚುವ ಮೂಲಕ ಸೊಳ್ಳೆಗಳು ಮನೆಯೊಳಗೆ ಬಾರದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ADVERTISEMENT

23 ವಾರ್ಡ್‌ಗಳಲ್ಲಿ ಫಾಗಿಂಗ್ ಸಿಂಪಡಣೆ ಮಾಡಲು ಪುರಸಭೆ ಕ್ರಮ ಕೈಗೊಂಡಿದೆ. ಪಟ್ಟಣದ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಸಾರ್ವಜನಿಕರು ಸಹ ಪೌರ ಕಾರ್ಮಿಕರು ಹಾಗೂ ಪುರಸಭೆಯೊಂದಿಗೆ ಸಹಕಾರ ನೀಡುವ ಮೂಲಕ ಪಟ್ಟಣದಲ್ಲಿ ಡೆಂಗಿ ಹರಡದಂತೆ ನೋಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಇಂದಿರಾ ಕ್ಯಾಂಟಿನ್ ಉದ್ಘಾಟನೆ ಶೀಘ್ರ:

ಪಟ್ಟಣದ ಹಳೆಯ ಪ್ರವಾಸಿ ಮಂದಿರದಲ್ಲಿ ನಿರ್ಮಿಸಲಾದ ಇಂದಿರಾ ಕ್ಯಾಂಟಿನ್ ಅನ್ನು ಶೀಘ್ರ ಉದ್ಘಾಟಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಬಗ್ಗೆ ಕ್ಯಾಂಟಿನ್ ಗುತ್ತಿಗೆದಾರರೊಂದಿಗೆ ಚರ್ಚಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.