ಶಕ್ತಿನಗರ: ರಾಯಚೂರು ತಾಲ್ಲೂಕಿನ ದೇವಸೂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಘವೇಂದ್ರ ಕಾಲೊನಿಯಲ್ಲಿ ಡೆಂಗಿ ಭೀತಿ ಎದುರಾಗಿದೆ.
ಸಾಂಕ್ರಾಮಿಕ ರೋಗಗಳ ಹಾವಳಿ ಇನ್ನಿಲ್ಲದಂತೆ ಕಾಡುತ್ತಿದೆ. ಒಂದು ಮನೆಯಲ್ಲಿ ಯಾರಿಗಾದರೂ ಜ್ವರ ಕಾಣಿಸಿಕೊಂಡರೆ ಇಡೀ ಮನೆಯವರನ್ನೆಲ್ಲ ಕಾಡುವ ಭೀತಿ ಎದುರಾಗಿದೆ. ರಾಘವೇಂದ್ರ ಕಾಲೊನಿಯಲ್ಲಿ ಜ್ವರದ ಹಾವಳಿ ಜೋರಾಗಿಯೇ ಇದೆ. ಮೋಡ ಕವಿದ ವಾತಾವರಣವೂ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಳಕ್ಕೆ ಕಾರಣವಾಗಿದೆ.
ರಾಘವೇಂದ್ರ ಕಾಲೊನಿ ನಿವಾಸಿ ಕುಮಾರ ಹಿರೇಮಠ, ಪದ್ಮಾ, ರಮಾ ಜಾನಬಿ, ಉಮಾ, ಭಾರತಿ, ಸುಮಾ, ಶರಣಮ್ಮ ಮತ್ತು ಕವಿತಾ ಸೇರಿ ಒಟ್ಟು ಏಳು ಜನರಿಗೆ ಡೆಂಗಿ ಕಾಣಿಸಿಕೊಂಡಿದೆ.
ಅವರೆಲ್ಲರೂ ರಾಯಚೂರು ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಷ್ಟೆಲ್ಲ ಪ್ರಕರಣಗಳು ಕಂಡು ಬಂದರೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಕಾಲೊನಿಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನೆಯ ಒಳಗೆ ಹಾಗೂ ಸುತ್ತಮುತ್ತಲು ನೀರು ನಿಲ್ಲಬಹುದಾದ ವಾಷ್ ಬೇಸಿನ್, ತೊಟ್ಟಿ, ಡ್ರಮ್, ಹೂ ಕುಂಡಗಳು, ಹಳ್ಳ, ನೀರು ನಿಲ್ಲುವ ಸ್ಥಳಗಳನ್ನು ಎಚ್ಚರಿಕೆಯಿಂದ ನರ‍್ವಹಿಸಬೇಕಿದೆ. ಕಾಲಕಾಲಕ್ಕೆ ನೀರು ನಿಲ್ಲುವ ಸ್ಥಳಗಳನ್ನು ಸ್ವಚ್ಛಗೊಳಿಸುವ ಮೂಲಕ ಸೊಳ್ಳೆಗಳಿಂದ ಹರಡುವ ರೋಗಗಳು ಬಾರದಂತೆ ನೋಡಿಕೊಳ್ಳಬೇಕಿದೆ. ಅದರಲ್ಲೂಗ್ರಾಮೀಣ ಪ್ರದೇಶದಲ್ಲಿಸರಿಯಾದ ಚರಂಡಿ ವ್ಯವಸ್ಥೆಗಳು ಇಲ್ಲದ ಕಾರಣ ತೆರೆದ ಚರಂಡಿಗಳಲ್ಲೇ ನೀರು ನಿಲ್ಲುವುದರಿಂದ ದೇವಸೂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಆರೋಗ್ಯ ಇಲಾಖೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ವಿ.ಬಾಬು ಅವರು ಒತ್ತಾಯಿಸಿದ್ದಾರೆ.
ಮನೆಯ ಸುತ್ತಮುತ್ತಲು ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳಿಂದ ಹರಡುವ ಡೆಂಗಿ, ಚಿಕನ್‌ಗುನ್ಯ, ಮಲೇರಿಯಾದಂತಹ ರೋಗಗಳನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆ ವತಿಯಿಂದ ಮನೆ ಮನೆಗೂ ತೆರಳಿ ಲರ‍್ವ ಸಮಿಕ್ಷೆ ನಡೆಸಿ ಜನರಲ್ಲಿಅರಿವು ಮೂಡಿಸಬೇಕಿದೆ.
ಕಾಲೊನಿಯಲ್ಲಿ ಜ್ವರ ಕಾಣಿಸಿಕೊಂಡರೆ ಸುತ್ತಮುತ್ತಲ ಜನರಲ್ಲಿ ಲರ‍್ವ ಸಮೀಕ್ಷೆ ನಡೆಸಬೇಕಿದೆ. ಅಲ್ಲದೇ ದೊಡ್ಡ ದೊಡ್ಡ ಹಳ್ಳಗಳು, ಗುಂಡಿಗಳಲ್ಲಿರುವ ಸೊಳ್ಳೆ ತಡೆಗೆ ತಾಂತ್ರಿಕ ರ‍್ಗದವರ ಜತೆ ಸಭೆ ನಡೆಸಿ ಜ್ವರ ಪ್ರಕರಣಗಳ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಲು ಮುಂದಾಗಬೇಕು ಎಂದು ನಿವಾಸಿಗಳು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.