ದೇವದುರ್ಗ: ಶಾಸಕಿ ನಿಂದನೆ ಮಾಡಿದ ಆರೋಪದ ಮೇಲೆ ಮಾಜಿ ಶಾಸಕ ಕೆ. ಶಿವನಗೌಡ ನಾಯಕ ಹಾಗೂ 7 ಬಿಜೆಪಿ ಮುಖಂಡರ ವಿರುದ್ಧ ದೂರು ದಾಖಲಾಗಿದೆ.
ತಾಲ್ಲೂಕಿನ ಆಲದಮರ ತಾಂಡದಲ್ಲಿ ಭಾನುವಾರ ಲೈನ್ ಮನ್ ವಿರೂಪಾಕ್ಷ ಮೃತಪಟ್ಟ ಸ್ಥಳಕ್ಕೆ ಶಾಸಕಿ ಕರೇಮ್ಮ ಜಿ ನಾಯಕ ಅವರು ಭೇಟಿ ನೀಡಿದ್ದರು. ಈ ಮೇಲೆ ಶಾಸಕಿಗೆ ಬಿಜೆಪಿಯ ಮುಖಂಡರು ಅಶ್ಲೀಲ ಪದಗಳಿಂದ ನಿಂದಿಸಿದ್ದರು.
ನಿಂದನೆ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಆಗುತ್ತಿದ್ದಂತೆ ಬಿಜೆಪಿ ಮುಖಂಡರನ್ನು ಬಂಧಿಸುವಂತೆ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
’ಪೊಲೀಸರ ವೈಫಲ್ಯದಿಂದ ಈ ಘಟನೆ ನಡೆಯುತ್ತಿವೆ. ಶಾಸಕರಿಗೆ ರಕ್ಷಣೆ ಇಲ್ಲ. ಪಿಎಸ್‌ಐ ಹೋಸಕೆರಪ್ಪ ತಾಲ್ಲೂಕಿನಲ್ಲಿ ಅರಾಜಕತೆ ಸೃಷ್ಟಿ ಮಾಡುತ್ತಿದ್ದಾರೆ. ಪಿಎಸ್‌ಐ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು’ ಜೆಡಿಎಸ್ ಮುಖಂಡ ಬಸವರಾಜ ನಾಯಕ ಮಸ್ಕಿ ಕೋತ್ತದೊಡ್ಡಿ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದರು.
ಎಸ್‌ಪಿ ನಿರ್ದೇಶನ ನೀಡಿದ ನಂತರ ಪಿಎಸ್‌ಐ ಹೊಸಕೇರಪ್ಪ ಅವರು ಬಿಜೆಪಿಯ ಮಾಜಿ ಶಾಸಕ ಕೆ. ಶಿವನಗೌಡ ಸಹೋದರ ಭಗವಂತ್ರಾಯ ನಾಯಕ ಸೇರಿದಂತೆ 8 ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಸಿಕೊಂಡರು.
ಪ್ರಕರಣ ದಾಖಲಿಸಿಕೊಂಡರೆ ಸಾಲದು. ಕಿಡಿಗೇಡಿಗಳನ್ನು 24 ಗಂಟೆಯ ಒಳಗಡೆ ಬಂಧಿಸದಿದ್ದರೆ ಠಾಣೆಗೆ ಮತ್ತೆ ಮುತ್ತಿಗೆ ಹಾಕುವುದಾಗಿ ಜೆಡಿಎಸ್ ಕಾರ್ಯಕರ್ತರು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.