ADVERTISEMENT

ರಾಯಚೂರು: ಮಹಿಳಾ ದೌರ್ಜನ್ಯ ತಡೆಗೆ ‘ಧ್ವನಿ’ ಟ್ರಸ್ಟ್ ರಚನೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2024, 14:28 IST
Last Updated 25 ನವೆಂಬರ್ 2024, 14:28 IST

ರಾಯಚೂರು: ‘ರಾಜ್ಯದಲ್ಲಿ ಮಹಿಳೆಯರ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ‘ಕರ್ನಾಟಕ ರಾಜ್ಯ ಧ್ವನಿ ಮಹಿಳಾ ಮತ್ತು ಮಕ್ಕಳ ಟ್ರಸ್ಟ್’ ರಚಿಸಲಾಗಿದೆ. ಮಹಿಳೆಯರು ಹಾಗೂ ಮಕ್ಕಳ ಸಂಬಂಧಿತ ದೂರುಗಳನ್ನು ಸಂಸ್ಥೆಗೆ ಸಲ್ಲಿಸಿದರೆ ಅವರ ಪರ ಹೋರಾಡಿ ನ್ಯಾಯ ಒದಗಿಸಲಾಗುವುದು’ ಎಂದು ಸಂಸ್ಥೆಯ ಅಧ್ಯಕ್ಷೆ ರಜನಿರಾಜ್ ಹೇಳಿದರು.

‘ಸರ್ಕಾರಿ ಮಹಿಳಾ ನೌಕರರು, ಮಹಿಳೆಯರಿಗೆ ವಂಚನೆ ಪ್ರಕರಣ ಸೇರಿ ಈಗಾಗಲೇ ನಮ್ಮ ಸಂಸ್ಥೆಯಿಂದ 33 ಪ್ರಕರಣಗಳನ್ನು  ಪರಿಹರಿಸಲಾಗಿದೆ. ನಮ್ಮ ಸಂಸ್ಥೆಯ ಸೇವೆ ಗುರುತಿಸಿ ನ್ಯಾಯಾಧೀಶರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಶಂಸಾ ಪತ್ರ ನೀಡಿ ಸಂಸ್ಥೆಯ ಪದಾಧಿಕಾರಿಳಿಗೆ ಸನ್ಮಾನಿಸಿದ್ದಾರೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

‘ಟ್ರಸ್ಟ್‌ನಿಂದ ಯಾವುದೇ ದೂರುಗಳಿಗೆ ಸಂಬಂಧಪಟ್ಟಂತೆ ಕಾನೂನು ನೆರವು ನೀಡಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತೇವೆ. ರಾಜ್ಯದಲ್ಲಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಯಾವುದೇ ರೀತಿ ಸಮಸ್ಯೆಗಳು ಇದ್ದಲ್ಲಿ ಸಂಸ್ಥೆಯ ಮೊ.ಸಂ.: 99865 60974ಗೆ ಸಂಪರ್ಕಿಸಬಹುದು’ ಎಂದರು.

ADVERTISEMENT

ವಕೀಲೆ ರಶ್ಮಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.