ADVERTISEMENT

ಕವಿತಾಳ: ರಥ ನಿರ್ಮಾಣಕ್ಕೆ ಕಟ್ಟಿಗೆ ದೇಣಿಗೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 14:28 IST
Last Updated 2 ಜುಲೈ 2024, 14:28 IST
ಕವಿತಾಳ ಸಮೀಪದ ಉಟಕನೂರು ಮಠಕ್ಕೆ ಮಂಗಳವಾರ ಕಟ್ಟಿಗೆ ತಂದ ಟ್ರ್ಯಾಕ್ಟರ್‌ ಅನ್ನು ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು
ಕವಿತಾಳ ಸಮೀಪದ ಉಟಕನೂರು ಮಠಕ್ಕೆ ಮಂಗಳವಾರ ಕಟ್ಟಿಗೆ ತಂದ ಟ್ರ್ಯಾಕ್ಟರ್‌ ಅನ್ನು ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು   

ಕವಿತಾಳ: ಸಮೀಪದ ಉಟಕನೂರು ಅಡವಿ ಸಿದ್ದೇಶ್ವರ ಮಠದ ರಥ ನಿರ್ಮಾಣಕ್ಕೆ ಸಿಂಧನೂರು ತಾಲ್ಲೂಕಿನ ಅಲಬನೂರು ಗ್ರಾಮದ ಭಕ್ತರು ದೇಣಿಗೆ ನೀಡಿದ ಕಟ್ಟಿಗೆಯನ್ನು ಮಂಗಳವಾರ ಇಲ್ಲಿ  ಮೆರವಣಿಗೆ ಮಾಡಲಾಯಿತು.

ಮಠದ ಪೀಠಾಧಿಪತಿ ಮರಿಬಸವರಾಜ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ‘ರಥ ನಿರ್ಮಾಣಕ್ಕೆ ಅಂದಾಜು ₹45 ಲಕ್ಷ ವೆಚ್ಚ ತಗುಲುತ್ತದೆ. ಅದನ್ನು ದೇಣಿಗೆ ರೂಪದಲ್ಲಿ ನೀಡಲು ಭಕ್ತರು ನಿರ್ಧರಿಸಿದ್ದು ಅದರಂತೆ ಕಟ್ಟಿಗೆ ನೀಡಿದ್ದಾರೆʼ ಎಂದು ತಿಳಿಸಿದರು.

ಡೊಳ್ಳು, ಭಾಜಾ ಭಜಂತ್ರಿ, ಸೇರಿದಂತೆ ಜೋಡೆತ್ತುಗಳ ಮೆರವಣಿಗೆ ಮೂಲಕ ಕಟ್ಟಿಗೆ ತಂದ ಟ್ರ್ಯಾಕ್ಟರ್‌ ಅನ್ನು ಸ್ವಾಗತಿಸಲಾಯಿತು. ಕಟ್ಟಿಗೆ ನೋಡಲು ನೂರಾರು ಭಕ್ತರು ನೆರೆದಿದ್ದರು.

ADVERTISEMENT

ಮುಖಂಡರಾದ ಸಿದ್ದಪ್ಪ ಧಣಿ, ಡಾ.ಬಸವರಾಜಪ್ಪ, ಶಿವರಾಜಪ್ಪ ಜೀನೂರು, ಕುಮಾರಸ್ವಾಮಿ, ಗುರುಶರ್ಮಾ, ಚನ್ನಬಸಯ್ಯಸ್ವಾಮಿ, ಮಲ್ಲಿಕಾರ್ಜುನ ಮೂಲಿಮನಿ, ಮೋಹನ ಕಾಳಗಿ, ಈರಪ್ಪ, ವಿರೂಪಾಕ್ಷಿಗೌಡ. ಬಸವರಾಜ, ಹುಚ್ಚರೆಡ್ಡಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.