ಮುದಗಲ್: ನರೇಗಾ ಯೋಜನೆಯ ಸಾಮಾಗ್ರಿ ಪೂರೈಕೆ ಗುತ್ತಿಗೆಯನ್ನು ತೇಜಸ್ವಿನಿ ಏಜೆನ್ಸಿಗೆ ನೀಡಬೇಡಿ ಎಂದು ಸಮೀಪದ ತಲೇಖಾನ ಗ್ರಾಮ ಪಂಚಾಯಿತಿ ಸದಸ್ಯರು ಪಿಡಿಒಗೆ ಮನವಿ ಪತ್ರ ಸಲ್ಲಿಸದರು.
ತೇಜಸ್ವಿನಿ ಏಜೆನ್ಸಿ ನರೇಗಾ ಕಾಮಗಾರಿಗಳ ಸಾಮಗ್ರಿಗಳ ಸಮರ್ಪಕವಾಗಿ ಪೂರೈಸಿಲ್ಲ. ಕಾಮಗಾರಿ ಪೂರ್ಣಗೊಳಿಸುವಲ್ಲಿ ಸಹಕರಿಸಿಲ್ಲ. ಇದರಿಂದ ಅನೇಕ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. 2024-25ನೇ ಸಾಲಿನ ನರೇಗಾ ಯೋಜನೆಗೆ ಕರೆಯಲಾದ ಸಾಮಗ್ರಿ ಪೂರೈಕೆ ಗುತ್ತಿಗೆಯನ್ನು ನೀಡದಂತೆ ತಡೆಹಿಡಿಯಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯರು ಲಿಖಿತ ಮನವಿ ಸಲ್ಲಿಸಿದರು. ಮನವಿ ಪತ್ರವನ್ನ ಅಧ್ಯಕ್ಷೆ ಉಮ್ಮವ್ವ ರಾಠೋಡ್ ಹಾಗೂ ಪಿಡಿಒ ವಿಶ್ವನಾಥ ಸ್ವೀಕರಿಸಿದರು.
ಉಪಾಧ್ಯಕ್ಷೆ ಲಕ್ಷ್ಮವ್ವ ಕನಕಪ್ಪ, ಸದಸ್ಯರಾದ ವೀರನಗೌಡ ತಲೇಖಾನ, ದುರುಗಪ್ಪ ಕಟ್ಟಿಮನಿ, ಪಾಂಡುರಂಗ ನಾಯ್ಕ, ಹನುಮಂತಪ್ಪ ಗಂಟಿ, ಮೌನೇಶ ಕಸ್ತೂರಿ ತಾಂಡಾ, ಹನುಮಂತಪ್ಪ ತಲೇಖಾನ, ಮಾನಸಿಂಗ್ ರಾಠೋಡ, ಶಾರದಮ್ಮ ತಲೇಖಾನ, ಮಲ್ಲಮ್ಮ ಹಡಗಲಿ, ಚನ್ನಮ್ಮ ಸೊಂಪುರ ತಾಂಡಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.