ADVERTISEMENT

ಮೊಟ್ಟೆ ದರ, ಸಾದಿಲ್ವಾರು ಹೆಚ್ಚಿಳಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 11:43 IST
Last Updated 15 ನವೆಂಬರ್ 2024, 11:43 IST
ಲಿಂಗಸುಗೂರಲ್ಲಿ ಗುರುವಾರ ಸರ್ಕಾರಿ ಪ್ರಾಥಮಿಕ ಶಾಲಾ ಪದವಿದರ ಮುಖ್ಯ ಶಿಕ್ಷಕರ ಸಂಘದ ಸದಸ್ಯರು ಮೊಟ್ಟೆ ದರ ಮತ್ತುಸಾದಿಲ್ವಾರು ಹಣ ಹೆಚ್ಚಿಸಲು ಆಗ್ರಹಿಸಿ ಅಕ್ಷರ ದಾಸೋಹ ಅಧಿಕಾರಿ ಮಾರ್ಟಿನ್ ಅವರಿಗೆ ಮನವಿ ಸಲಗಲಿಸಿದರು
ಲಿಂಗಸುಗೂರಲ್ಲಿ ಗುರುವಾರ ಸರ್ಕಾರಿ ಪ್ರಾಥಮಿಕ ಶಾಲಾ ಪದವಿದರ ಮುಖ್ಯ ಶಿಕ್ಷಕರ ಸಂಘದ ಸದಸ್ಯರು ಮೊಟ್ಟೆ ದರ ಮತ್ತುಸಾದಿಲ್ವಾರು ಹಣ ಹೆಚ್ಚಿಸಲು ಆಗ್ರಹಿಸಿ ಅಕ್ಷರ ದಾಸೋಹ ಅಧಿಕಾರಿ ಮಾರ್ಟಿನ್ ಅವರಿಗೆ ಮನವಿ ಸಲಗಲಿಸಿದರು   

ಲಿಂಗಸುಗೂರು: ಪ್ರಧಾನಮಂತ್ರಿ ಪೋಷಣ ಅಭಿಯಾನದಡಿ ನೀಡುವ ಮೊಟ್ಟೆ ಸಾದಿಲ್ವಾರು ಹಣ ಹೆಚ್ಚಿಸಲು ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಮುಖ್ಯ ಶಿಕ್ಷಕರ ಸಂಘ ಒತ್ತಾಯಿಸಿದೆ.

ಗುರುವಾರ ಅಕ್ಷರ ದಾಸೋಹ ಅಧಿಕಾರಿ ಅಮಲರಾಜ್ ಮಾರ್ಟಿನ್ ಅವರಿಗೆ ಮನವಿ ಸಲ್ಲಿಸಿ, ‘ಸದ್ಯ ಒಂದು ಮೊಟ್ಟೆಗೆ ₹6 ನೀಡಲಾಗುತ್ತಿದೆ. ಮಾರುಕಟ್ಟೆ ದರ ₹6.50ಕ್ಕೆ ಏರಿಕೆ ಆಗಿದ್ದು ಬಿಸಿಯೂಟ ಅಡುಗೆದಾರರ ಸಾದಿಲ್ವಾರು ಒಟ್ಟು ₹7 ಆಗುತ್ತದೆ’ ಎಂದು ಗಮನ ಸೆಳೆದರು.

‘ಮೊಟ್ಟೆ ದರ ಮತ್ತು ಸಾದಿಲ್ವಾರು ಹಣ ಮಾರುಕಟ್ಟೆ ದರ ಆಧರಿಸಿ ಹೆಚ್ಚಿಸಬೇಕು. ಮೊಟ್ಟೆ ಖರೀದಿಯಿಂದ ಮುಖ್ಯ ಶಿಕ್ಷಕರನ್ನು ಮುಕ್ತಿಗೊಳಿಸಬೇಕು. ಅಜೀಂ ಪ್ರೇಮಜಿ ಫೌಂಡೇಷನ್ ಅನುದಾನ ಜಿ.ಎಸ್.ಟಿ ವಿನಾಯ್ತಿ ನೀಡಬೇಕು. ಇಲಾಖೆ ಮೊಟ್ಟೆ ಪೂರೈಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ADVERTISEMENT

ಅಧ್ಯಕ್ಷ ಅಮರಪ್ಪ ಸಾಲಿ, ಸದಸ್ಯರಾದ ಶಿವಶಂಕರ ಪಾಟೀಲ, ನಾಗೇಶ, ಹುಲಗಪ್ಪ, ಶೇಖಫರಿಯಾನ್, ಶೆಟ್ಟೆಪ್ಪ, ಲಕ್ಕನಗೌಡ ಲೆಕ್ಕಿಹಾಳ, ಮಲ್ಲಪ್ಪ ನಗಾರಿ, ಸಂಗಯ್ಯ, ಕಾಶಿಬಾಯಿ, ಶರಣಮ್ಮ, ಶೋಭಾ ಪಾಟೀಲ, ರುಕ್ಮುದ್ದೀನ್, ಶರಣಬಸವ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.