ಕವಿತಾಳ: ‘ಸಸಿಗಳನ್ನು ನೆಡುವುದರ ಜತೆಗೆ ಅವುಗಳ ಪೋಷಣೆಗೆ ಎಲ್ಲರೂ ಕಾಳಜಿ ವಹಿಸಬೇಕು’ ಎಂದು ಎಸ್‌ಬಿಐ ವ್ಯವಸ್ಥಾಪಕ ಉಮೇಶ ವಡ್ಡರ್ ಹೇಳಿದರು.
ದಿ.ಮಲ್ಲಮ್ಮ ಕಲ್ ಶೆಟ್ಟಿ ಅವರ ಪುಣ್ಯ ಸ್ಮರಣೆ ನಿಮಿತ್ತ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಗಿಡ– ಮರಗಳನ್ನು ಬೆಳೆಸುವುದು ಮತ್ತು ಪರಿಸರದಲ್ಲಿ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ’ ಎಂದರು.
ಡಾ.ಅಮೃತ ರಾಠೋಡ್, ಸಬ್ ಇನ್‌ಸ್ಪೆಕ್ಟರ್ ಎಂ.ವೆಂಕಟೇಶ, ವಲಯ ಅರಣ್ಯ ಅಧಿಕಾರಿ ರಾಜೇಶ ನಾಯಕ, ವನಸಿರಿ ಫೌಂಡೇಶನ್ ಅಧ್ಯಕ್ಷ ಪ್ರದೀಪ್ ಪೂಜಾರಿ, ಕರವೇ ಹೋಬಳಿ ಘಟಕದ ಅಧ್ಯಕ್ಷ ಸಂತೋಷ ಕಲ್ ಶೆಟ್ಟಿ, ಡಿವೈಎಫ್‌ಐ ಸಂಘಟನೆಯ ರಫಿ ಬೋದಲ್, ನಾಗರಾಜ ಸಾಹುಕಾರ, ಮೌಲಾಲಿ, ಜಾನಿ, ಮಂಜುನಾಥ ಭಜಂತ್ರಿ, ಶಂಕ್ರಪ್ಪ ಯಕ್ಲಾಸ್ಪುರ, ಶಿವು ಛಲವಾದಿ, ವಸಂತ, ಹನುಮನಗೌಡ ನಾಯಕ, ಅಯ್ಯಾಳಪ್ಪ, ಯಮನಪ್ಪ ಗುತ್ತೇದಾರ ಮತ್ತು ರಮೇಶ ಮತ್ತಿತರರು ಇದ್ದರು.
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ, ಪ್ರವಾಸಿ ಮಂದಿರ, ಹೊಸ ಬಸ್ ನಿಲ್ದಾಣ, ಜೆಸ್ಕಾಂ ಕಚೇರಿ ಮತ್ತಿತರ ಕಡೆ ಸಸಿಗಳನ್ನು ನೆಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.