ADVERTISEMENT

ರಾಯಚೂರು: ನಗರದಲ್ಲಿ ವಿಶೇಷ ಆಭರಣಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 27 ಜುಲೈ 2024, 13:53 IST
Last Updated 27 ಜುಲೈ 2024, 13:53 IST
ರಾಯಚೂರಿನ ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲರ್ಸ್ ಹೋಟೆಲ್ ರಂಜಿತ ಪ್ಯಾಲೇಸ್‌ನಲ್ಲಿ ಏರ್ಪಡಿಸಿರುವ ವಿಶೇಷ ಆಭರಣ ಪ್ರದರ್ಶನವನ್ನು ಉದ್ಯಮಿ ತ್ರಿವಿಕ್ರಂ ಜೋಶಿ ಉದ್ಘಾಟಿಸಿದರು
ರಾಯಚೂರಿನ ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲರ್ಸ್ ಹೋಟೆಲ್ ರಂಜಿತ ಪ್ಯಾಲೇಸ್‌ನಲ್ಲಿ ಏರ್ಪಡಿಸಿರುವ ವಿಶೇಷ ಆಭರಣ ಪ್ರದರ್ಶನವನ್ನು ಉದ್ಯಮಿ ತ್ರಿವಿಕ್ರಂ ಜೋಶಿ ಉದ್ಘಾಟಿಸಿದರು   

ರಾಯಚೂರು: ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲರ್ಸ್ ಹೋಟೆಲ್ ರಂಜಿತ ಪ್ಯಾಲೇಸ್‌ನಲ್ಲಿ ವಿಶೇಷ ಆಭರಣ ಪ್ರದರ್ಶನ ಏರ್ಪಡಿಸಿದೆ.

ಉದ್ಯಮಿ ತ್ರಿವಿಕ್ರಂ ಜೋಶಿ ಪ್ರದರ್ಶನಕ್ಕೆ ಚಾಲನೆ ನೀಡಿದರು. ಚೆಟ್ಟಿ ಗ್ರೂಪ್ ಆಫ್ ಜ್ಯುವೆಲರ್ಸ್ ಮಾರಾಟ ಸಿಬ್ಬಂದಿ ಉಪಸ್ಥಿತರಿದ್ದರು.

ಚಿನ್ನ ಮತ್ತು ರತ್ನಗಳು ಹಾಗೂ ಅತ್ಯುತ್ತಮವಾದ ಕರಕುಶಲತೆಯೊಂದಿಗೆ ಸಾಂಪ್ರದಾಯಿಕ ಮತ್ತು ಸಮಕಾಲೀನ ಸೃಷ್ಟಿಗಳ ಸಂಗ್ರಹವನ್ನು ವಿಶಿಷ್ಟ ಶ್ರೇಣಿಯೊಂದಿಗೆ ಪ್ರದರ್ಶಿಸಲಾಗಿದೆ.

ADVERTISEMENT

ರಾಯಚೂರಿನ ಗ್ರಾಹಕರಿಗಾಗಿ ಸಿ.ಕೃಷ್ಣಯ್ಯ ಚೆಟ್ಟಿ ಜ್ಯೂವೆಲರ್ಸ್ ವಿಶೇಷ ಕೊಡುಗೆಯೊಂದಿಗೆ ಬಂದಿದೆ. ಬೆಳ್ಳಿ ಮೇಲೆ ಶೇ 2, ಚಿನ್ನದ ಮೇಲೆ ಶೇ 4, ವಜ್ರದ ಮೇಲೆ ಶೇ 6 ಮತ್ತು ₹18.69 ಲಕ್ಷ ಮೌಲ್ಯದ ವಜ್ರದ ಮೇಲೆ ಶೇ 9ರಷ್ಟು ರಿಯಾಯಿತಿ ಘೋಷಿಸಲಾಗಿದೆ. ರಿಯಾಯಿತಿ ಜು.29ಕ್ಕೆ ಕೊನೆಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.