ADVERTISEMENT

ಅಂತರ್ಜಲ ಮಟ್ಟ ಹೆಚ್ಚಿಸಲು ಆದ್ಯತೆ ನೀಡಿ: ಚಂದ್ರಶೇಖರ

ಗಿಲ್ಲೇಸೂಗುರು ಗ್ರಾಮ ಪಂಚಾಯಿತಿಗೆ ಇಒ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 13:54 IST
Last Updated 30 ಜೂನ್ 2024, 13:54 IST
ರಾಯಚೂರು ತಾಲ್ಲೂಕಿನ ಗಿಲ್ಲೇಸೂಗುರು ಗ್ರಾಮದಲ್ಲಿ ನರೇಗಾದಲ್ಲಿ ಕೈಗೊಂಡ ಕಾಮಗಾರಿಯನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹ ಅಧಿಕಾರಿ ಚಂದ್ರಶೇಖರ ಪವಾರ್ ಪರಿಶೀಲಿಸಿದರು
ರಾಯಚೂರು ತಾಲ್ಲೂಕಿನ ಗಿಲ್ಲೇಸೂಗುರು ಗ್ರಾಮದಲ್ಲಿ ನರೇಗಾದಲ್ಲಿ ಕೈಗೊಂಡ ಕಾಮಗಾರಿಯನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹ ಅಧಿಕಾರಿ ಚಂದ್ರಶೇಖರ ಪವಾರ್ ಪರಿಶೀಲಿಸಿದರು   

ರಾಯಚೂರು: ತಾಲ್ಲೂಕಿನ ಗಿಲ್ಲೇಸೂಗುರು ಗ್ರಾಮ ಪಂಚಾಯಿತಿಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವಾರ್ ಭೇಟಿ ನೀಡಿ ನರೇಗಾದ ವಿವಿಧ ಕಾಮಗಾರಿಗಳ ಪರಿಶೀಲನೆ ಮಾಡಿದರು.

ನಂತರ ಕೂಲಿಕಾರ್ಮಿಕರ ಜೊತೆ ಮಾತನಾಡಿ,‘ಗುಡ್ಡದ ಕೆಳ ಭಾಗದಲ್ಲಿ ದೊಡ್ಡದಾದ ಕಂದಕ ಬದು ನಿರ್ಮಾಣ ಮಾಡಿದರೆ ಸುಮಾರು 2 ಲಕ್ಷ ಲೀಟರ್ ನೀರನ್ನು ಸಂಗ್ರಹ ಮಾಡಲು ಸಾಧ್ಯವಾಗಲಿದೆ. ಇದರಿಂದ ಜಾನುವಾರಗಳಿಗೆ ಮೇವು ಬೆಳೆಯಲು ಮತ್ತು ನೀರು ಕುಡಿಯಲು ಅನುಕೂಲವಾಗುತ್ತದೆ’ ಎಂದರು.

ನರೇಗಾ ಸಹಾಯಕ ನಿರ್ದೇಶಕ ಹನುಮಂತ, ಪಿಡಿಒ ರವಿಕುಮಾರ್, ಬಿ.ಸಿ ಭೀಮರೆಡ್ಡಿ, ಬಿ.ಎಫ್.ಟಿ ಇಮಾನುವೆಲ್, ಜಿ.ಕೆ.ಎಂ ಭೀಮವ್ವ ಹಾಗೂ ಮೇಟ್ ಕೂಲಿಕಾರರು ಮತ್ತು ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.