ADVERTISEMENT

ರಾಯಚೂರು | ಮಂತ್ರಾಲಯದಲ್ಲಿ ಗೋಪೂಜೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2024, 16:28 IST
Last Updated 31 ಅಕ್ಟೋಬರ್ 2024, 16:28 IST
ಮಂತ್ರಾಲಯದಲ್ಲಿ ಗುರುವಾರ ಸುಬುದೇಂದ್ರ ತೀರ್ಥರು ಗೋಪೂಜೆ ನೆರವೇರಿಸಿದರು
ಮಂತ್ರಾಲಯದಲ್ಲಿ ಗುರುವಾರ ಸುಬುದೇಂದ್ರ ತೀರ್ಥರು ಗೋಪೂಜೆ ನೆರವೇರಿಸಿದರು   

ರಾಯಚೂರು: ನರಕಚತುರ್ದಶಿ ನಿಮಿತ್ತ ಮಂತ್ರಾಲಯದ ಶ್ರೀ ಮಠದಲ್ಲಿ ಧಾರ್ಮಿಕ ವಿಧಿವಿಧಾನಗಳು ಜರುಗಿದವು.

 ಮಂತ್ರಾಲಯದ ಮಠಾಧೀಶ ಶ್ರೀ ಸುಬುದೇಂದ್ರ ತೀರ್ಥರು ಶ್ರೀ ಮೂಲ ರಾಮದೇವರಿಗೆ ಕಾರ್ತಿಕ ಮಂಗಳಾರತಿ ನೆರವೇರಿಸಿದರು. ನಂತರ ಶ್ರೀ ರಾಯರ ಮೂಲ ಬೃಂದಾವನ ಹಾಗೂ ಮಠದ ಇತರ ಬೃಂದಾವನಗಳಿಗೆ ಗೋಪೂಜೆ, ತುಳಸಿ ಪೂಜೆ, ತೈಲಾಭ್ಯಂಜನ ನೆರವೇರಿಸಿದರು.
ತದನಂತರ ನರಕೃತ ನೀರಾಜನಂ ಕಾರ್ಯಕ್ರಮವನ್ನು ನಡೆಸಿಕೊಟ್ಟು, ಶ್ರೀ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿ ಭಕ್ತರಿಗೆ ಆಶೀರ್ವದಿಸಿದರು.

ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಕ್ತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT