ADVERTISEMENT

ರಾಯಚೂರು | ಹಿರೇಕಾಯಿ, ಬೀನ್ಸ್‌, ಗಜ್ಜರಿ ಕೆಜಿಗೆ ₹80

ಬೆಳ್ಳುಳ್ಳಿ ಪ್ರತಿ ಕೆಜಿಗೆ ₹400 : ಎರಡು ವಾರಗಳಿಂದ ಬೆಲೆ ಸ್ಥಿರ

ಚಂದ್ರಕಾಂತ ಮಸಾನಿ
Published 24 ನವೆಂಬರ್ 2024, 6:51 IST
Last Updated 24 ನವೆಂಬರ್ 2024, 6:51 IST
ರಾಯಚೂರಿನ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿದ ಗ್ರಾಹಕರು/ ಚಿತ್ರ; ಶ್ರೀನಿವಾಸ ಇನಾಮದಾರ್
ರಾಯಚೂರಿನ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿದ ಗ್ರಾಹಕರು/ ಚಿತ್ರ; ಶ್ರೀನಿವಾಸ ಇನಾಮದಾರ್   

ರಾಯಚೂರು: ಮಾರುಕಟ್ಟೆಯಲ್ಲಿ ಗ್ರಾಹಕರ ಅಚ್ಚುಮೆಚ್ಚಿನ ತರಕಾರಿಗಳ ದರ ಈ ವಾರ ಹೆಚ್ಚಾಗಿದೆ. ಅಡುಗೆ ತಯಾರಿಕೆಯಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿ ಹೆಚ್ಚು ಬಳಸುವವರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.

ಮಾರುಕಟ್ಟೆಗೆ ಬೆಳ್ಳುಳ್ಳಿ ಆವಕ ಕಡಿಮೆಯಾಗಿರುವ ಕಾರಣ ಸಹಜವಾಗಿಯೇ ದರ ಹೆಚ್ಚಿದೆ. ಸದ್ಯ ಬೆಲೆ ಇಳಿಯುವ ಲಕ್ಷಣಗಳು ಕಂಡು ಬರುತ್ತಿಲ್ಲ. ನಾಲ್ಕು ವಾರಗಳಿಂದ ಬೆಳ್ಳುಳ್ಳಿ ಬೆಲೆ ಗ್ರಾಹಕರ ಕೈಗೆಟಕುತ್ತಿಲ್ಲ.

ಪ್ರತಿ ಕ್ವಿಂಟಲ್‌ಗೆ ನುಗ್ಗೆಕಾಯಿ ₹4 ಸಾವಿರ, ಎಲೆಕೋಸು, ಹೂಕೋಸು ₹2 ಸಾವಿರ ಹೆಚ್ಚಳವಾಗಿದೆ. ಈರುಳ್ಳಿ, ಟೊಮೆಟೊ, ಬೆಂಡೆಕಾಯಿ ದರ ₹1 ಸಾವಿರ ಹೆಚ್ಚಾಗಿದೆ. ಸಬ್ಬಸಗಿ, ಕರಿಬೇವು, ಮೆಂತೆ ಪಲ್ಯಗಳ ದರ ಕೊಂಚ ಏರಿಕೆಯಾಗಿದೆ.‌

ADVERTISEMENT

ಆಲೂಗಡ್ಡೆ, ಹಿರೇಕಾಯಿ, ತುಪ್ಪದ ಹಿರೇಕಾಯಿ, ಸೌತೆಕಾಯಿ, ಕೊತಂಬರಿ ಹಾಗೂ ಪಾಲಕ ದರ ಸ್ಥಿರವಾಗಿದೆ. ಪ್ರತಿ ಕ್ವಿಂಟಲ್‌ಗೆ ಹಸಿ ಮೆಣಸಿನಕಾಯಿ ಪ್ರತಿ ಕ್ವಿಂಟಲ್‌ಗೆ ₹4 ಸಾವಿರ, ಗಜ್ಜರಿ, ಬೀಟ್‌ರೂಟ್‌, ಬದನೆಕಾಯಿ ₹2 ಸಾವಿರ ಇಳಿಕೆಯಾಗಿದೆ. ಬೀನ್ಸ್, ತೊಂಡೆಕಾಯಿ ಹಾಗೂ ಚವಳೆಕಾಯಿ ₹ 1 ಸಾವಿರ ಕಡಿಮೆಯಾಗಿದೆ.

ಬೆಳಗಾವಿ ಜಿಲ್ಲೆಯಿಂದ ಹಸಿ ಮೆಣಸಿನಕಾಯಿ, ಕೊತಂಬರಿ, ಮೆಂತೆ ಸೊಪ್ಪು ಇಲ್ಲಿಯ ತರಕಾರಿ ಸಗಟು ಮಾರುಕಟ್ಟೆಗೆ ಬಂದಿದೆ. ಆಂಧ್ರಪ್ರದೇಶ ಹಾಗೂ ತೆಲಂಗಾಣದ ಜಿಲ್ಲೆಗಳಿಂದ ರಾಯಚೂರು ಮಾರುಕಟ್ಟೆಗೆ ಹಿರೇಕಾಯಿ, ಗಜ್ಜರಿ,  ಅವರೆಕಾಯಿ, ಸೋರೆಕಾಯಿ, ಸೌತೆಕಾಯಿ, ಎಲೆಕೋಸು, ಹೂಕೋಸು ಹಾಗೂ ಸೊ‍ಪ್ಪು,  ನಾಸಿಕ್‌ನಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಆವಕವಾಗಿದೆ.

‘ಎಂದಿನಂತೆ ಬೆಳಗಾವಿ, ಹೈದರಾಬಾದ್‌ನಿಂದ ಹೆಚ್ಚಿನ ತರಕಾರಿ ಬಂದಿದೆ. ಬೆಳ್ಳುಳ್ಳಿ, ನುಗ್ಗೆಕಾಯಿ ಬಿಟ್ಟರೆ ಉಳಿದ ತರಕಾರಿ ಗ್ರಾಹಕರ ಕೈಗೆಟುವ ಬೆಲೆಯಲ್ಲಿ ದೊರೆಯುತ್ತಿದೆ’ ಎಂದು ತರಕಾರಿ ವ್ಯಾಪಾರಿ ಕೆ.ಶಶಿಕುಮಾರ ಹೇಳುತ್ತಾರೆ.

ತರಕಾರಿ (ಪ್ರತಿ ಕೆ.ಜಿ) ಕಳೆದ ವಾರ– ಈ ವಾರ (₹ ಗಳಲ್ಲಿ)

ಬೆಳ್ಳುಳ್ಳಿ– 400-400; 250-400

ಗಜ್ಜರಿ 80-100; 50-80

ಬೀನ್ಸ್ 120-90; 60-80

ಈರುಳ್ಳಿ 60-50; 50-60
‌ಆಲೂಗಡ್ಡೆ 40-40; 40-40
ಮೆಣಸಿನಕಾಯಿ 60-60; 30-40
ಎಲೆಕೋಸು 30-40; 50-60
ಹೂಕೋಸು 40-50; 40-60
ಬೀಟ್‌ರೂಟ್‌ 60-80; 40-60
ಟೊಮೆಟೊ 40-30; 30-40
ಬದನೆಕಾಯಿ 80-40; 40-20
ಹಿರೇಕಾಯಿ 60-80; 60-80
ಬೆಂಡೆಕಾಯಿ 80-50; 40-60
ತೊಂಡೆಕಾಯಿ 40-70; 50-60
ಡೊಣಮೆಣಸಿನಕಾಯಿ 75-80; 50-80
ತುಪ್ಪದ ಹಿರೇಕಾಯಿ 50-60; 40-60
ಚವಳೆಕಾಯಿ – 80-80; 50-70
ಸೌತೆಕಾಯಿ 100-60; 50-60
ನುಗ್ಗೆಕಾಯಿ 80-160; 80-100
ಸಬ್ಬಸಗಿ 10-20; 20-10
ಕರಿಬೇವು 10-10; 10-20
ಮೆಂತೆ 20-10; 20-20
ಕೊತಂಬರಿ 20-20; 10-20
ಪಾಲಕ 10-20; 10-20

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.