ADVERTISEMENT

ಹಟ್ಟಿ ಚಿನ್ನದ ಗಣಿ: ಗುರಿ ಮೀರಿ 9 ಕೆ.ಜಿ ಅಧಿಕ ಚಿನ್ನ ಉತ್ಪಾದನೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 16:11 IST
Last Updated 27 ಅಕ್ಟೋಬರ್ 2024, 16:11 IST
<div class="paragraphs"><p>ರಾಯಚೂರು ಜಿಲ್ಲೆ ಹಟ್ಟಿ ಚಿನ್ನದ ಗಣಿ</p></div>

ರಾಯಚೂರು ಜಿಲ್ಲೆ ಹಟ್ಟಿ ಚಿನ್ನದ ಗಣಿ

   

ಹಟ್ಟಿ ಚಿನ್ನದ ಗಣಿ (ರಾಯಚೂರು ಜಿಲ್ಲೆ): ರಾಜ್ಯ ಸರ್ಕಾರದ ಸ್ವಾಮ್ಯದ ಹಟ್ಟಿ ಚಿನ್ನದ ಗಣಿ ಕಂಪನಿ ಪ್ರಸಕ್ತ ಸಾಲಿನ ಅರ್ಧ ವಾರ್ಷಿಕ ನಿಗದಿತ ಗುರಿ ಮೀರಿ 9 ಕೆ.ಜಿ ಚಿನ್ನ ಉತ್ಪಾದಿಸಿದೆ.

2024ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ 752 ಕೆ.ಜಿ ಚಿನ್ನ ಉತ್ಪಾದನೆ ಗುರಿ ಹೋಂದಲಾಗಿತ್ತು, 761 ಕೆ.ಜಿ ಚಿನ್ನ ಉತ್ಪಾದನೆ ಮಾಡಿದೆ. ಅಂದರೆ 9 ಕೆ.ಜಿ ಚಿನ್ನವನ್ನು ಗುರಿ ಮೀರಿ ಉತ್ಪಾದನೆ ಮಾಡಿ ಸಾಧನೆ ಮಾಡಿದೆ.

ADVERTISEMENT

ಏಪ್ರಿಲ್ ತಿಂಗಳಲ್ಲಿ 9.43 ಕೆಜಿ, ಜೂನ್ ತಿಂಗಳಲ್ಲಿ 8.64 ಕೆಜಿ, ಜುಲೈ ತಿಂಗಳಲ್ಲಿ 16.51 ಕೆಜಿ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ 24.2 ಕೆಜಿ ಚಿನ್ನವನ್ನು ಗುರಿಗಿಂತ ಹೆಚ್ಚುವರಿಯಾಗಿ ಉತ್ಪಾದಿಸಲಾಗಿದೆ. ಆದರೆ ಮೇ ತಿಂಗಳ ವೇಳೆ ಗುರಿಯಲ್ಲಿ 27.71 ಕೆಜಿ ಹಾಗೂ ಆಗಸ್ಟ್ ತಿಂಗಳಲ್ಲಿ 15.16 ಕೆಜಿ ಕಡಿಮೆ ಉತ್ಪಾದನೆ ಮಾಡಲಾಗಿದೆ.

ಅದಿರು ಉತ್ಪಾದನೆಯಲ್ಲಿ ಹಿನ್ನಡೆ: ಕಳೆದ ಆರು ತಿಂಗಳಲ್ಲಿ ಚಿನ್ನ ಉತ್ಪಾದನೆಯಲ್ಲಿ ಸಾಧನೆ ಮಾಡಿರುವ ಕಂಪನಿ ಅದಿರು ಉತ್ಪಾದನೆಯಲ್ಲಿ ಮಾತ್ರ ಹಿನ್ನಡೆ ಕಂಡಿದೆ. ಈ ಅವಧಿಯಲ್ಲಿ 3.80 ಲಕ್ಷ ಮೆಟ್ರಿಕ್‌ ಟನ್ ಅದಿರು ಉತ್ಪಾದನೆ ಗುರಿಯಲ್ಲಿ 3.1378 ಲಕ್ಷ ಮೆಟ್ರಿ ಟನ್‌ ಅದಿರು ಉತ್ಪಾದನೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.