ADVERTISEMENT

ರಾಯಚೂರು: ಉಚಿತ ಆರೋಗ್ಯ ತಪಾಸಣೆ ಶಿಬಿರ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 14:00 IST
Last Updated 30 ಜೂನ್ 2024, 14:00 IST
ಶಕ್ತಿನಗರ ಸಮೀಪದ ಮರ್ಚೆಡ್ ಕಾರ್ಯಕ್ಷೇತ್ರದ ಸ್ಫೂರ್ತಿ ಜ್ಞಾನ ವಿಕಾಸ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಗಣ್ಯರು ಚಾಲನೆ ನೀಡಿದರು
ಶಕ್ತಿನಗರ ಸಮೀಪದ ಮರ್ಚೆಡ್ ಕಾರ್ಯಕ್ಷೇತ್ರದ ಸ್ಫೂರ್ತಿ ಜ್ಞಾನ ವಿಕಾಸ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಗಣ್ಯರು ಚಾಲನೆ ನೀಡಿದರು   

ಶಕ್ತಿನಗರ: ರಾಯಚೂರು ತಾಲ್ಲೂಕಿನ ಮರ್ಚೆಡ್ ಕಾರ್ಯಕ್ಷೇತ್ರದ ಸ್ಫೂರ್ತಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಈ ಗಣ್ಯರು ಚಾಲನೆ ನೀಡಿದರು.

ದೃಷ್ಟಿ ಆಸ್ಪತ್ರೆಯ ಸಿಬ್ಬಂದಿ, ಸಂಘದ ಸದಸ್ಯರಿಗೆ ಕಣ್ಣು ತಪಾಸಣೆ ಮತ್ತು ಬಿಪಿ, ಶುಗರ್ ತಪಾಸಣೆ ಮಾಡಿದರು. 21 ಜನರಿಗೆ ಉಚಿತವಾಗಿ ಕನ್ನಡಕ ವಿತರಣೆ ಮಾಡಲಾಯಿತು.

ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಶಿವಾಜಿ, ಒಕ್ಕೂಟ ಅಧ್ಯಕ್ಷ ಮೈಮುನ್ನಿಸ್‌, ದೃಷ್ಟಿ ಆಸ್ಪತ್ರೆಯ ಸಿಬ್ಬಂದಿ ನರಸಪ್ಪ ಮುಸ್ತಫಾ, ಸರ್ಕಾರಿ ಆರೋಗ್ಯ ಸಹಾಯಕ ಶ್ರೀದೇವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನ್ಯಾಸಕ ಗಿರಿಜ, ಮರ್ಚೆಡ್ ಗ್ರಾಮ ಪಂಚಾಯತಿಯ ಸದಸ್ಯ ಅನಿಲ್‌ ನಾಗೇಶ, ವಲಯದ ಮೇಲ್ವಿಚಾರಕ ವಿಜಯಲಕ್ಷ್ಮಿ ಇತರರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.