ADVERTISEMENT

ಬಿರುಗಾಳಿ ಮಳೆ: ಧರೆಗೆ ಉರುಳಿದ ಮರಗಳು

​ಪ್ರಜಾವಾಣಿ ವಾರ್ತೆ
Published 26 ಮೇ 2024, 15:22 IST
Last Updated 26 ಮೇ 2024, 15:22 IST
ಹಟ್ಟಿ ಚಿನ್ನದ ಗಣಿ ಪಟ್ಟಣದ ಧಾರುವಾಲ ಕ್ರೀಡಾಗಣ ಹತ್ತಿರ ಬೇವಿನ ಮರ ಬಿರುಗಾಳಿಗೆ ಉರಳಿ ಬಿದ್ದು ರಸ್ತೆ ಬಂದ್ ಆಗಿದ್ದು ಸಂಚಾರಕ್ಕೆ ತೊಂದರೆ ಉಂಟಾಯಿತು.
ಹಟ್ಟಿ ಚಿನ್ನದ ಗಣಿ ಪಟ್ಟಣದ ಧಾರುವಾಲ ಕ್ರೀಡಾಗಣ ಹತ್ತಿರ ಬೇವಿನ ಮರ ಬಿರುಗಾಳಿಗೆ ಉರಳಿ ಬಿದ್ದು ರಸ್ತೆ ಬಂದ್ ಆಗಿದ್ದು ಸಂಚಾರಕ್ಕೆ ತೊಂದರೆ ಉಂಟಾಯಿತು.   

ಹಟ್ಟಿಚಿನ್ನದಗಣಿ: ಹಟ್ಟಿ ಪಟ್ಟಣ ಸೇರಿದಂತೆ ಆನ್ವರಿ, ಮೇದಿನಾಪುರ, ರೋಡಲಬಂಡ, ಗುರುಗುಂಟಾ ಗ್ರಾಮದಲ್ಲಿ ಭಾರಿ ಬಿರುಗಾಳಿಗೆ ಮರಗಳು ಉರುಳಿ ಬಿದ್ದಿವೆ.

ಪಟ್ಟಣದ ಕಾಕಾನಗರ ಹಾಗೂ ದಾರುವಾಲ ಕ್ರೀಡಾಗಣ ಹತ್ತಿರ ದೊಡ್ಡ ಬೇವಿನ ಮರ ಗಾಳಿಗೆ ಉರಳಿ ಬಿದ್ದ ಪರಿಣಾಮ ರಸ್ತೆ ಸಂಪೂರ್ಣ ಬಂದ್ ಆಗಿ ಸಂಚಾರಕ್ಕೆ ತೊಂದರೆ ಉಂಟಾಯಿತು.

ಆನ್ವರಿ ಗ್ರಾಮದಲ್ಲಿ ಅರ್ಧ ಗಂಟೆಗೂ ಅಧಿಕ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಉತ್ತಮ ಮಳೆಯಾಗುತ್ತಿದ್ದು ಕೃಷಿ ಚಟುವಟಿಕೆಗಳಲ್ಲಿ ರೈತರು ತೊಡಗಿಕೊಂಡಿದ್ದಾರೆ. ಮಳೆ ಸುರಿದ ಪರಿಣಾಮ ವಿದ್ಯುತ್ ಸಂಪರ್ಕ ಇಲ್ಲದೆ‌ ಜನರು ಪರದಾಡಿದರು. ಬಿರುಗಾಳಿಗೆ ಮರಗಳು ರಸ್ತೆ ಮಧ್ಯೆ ಉರಳಿ ಬಿದ್ದ ಪರಿಣಾಮ ವಾಹನ ಸವಾರರು ಪರದಾಡಿದರು. ಜನ ಜೀವನ ಅಸ್ತವ್ಯಸ್ತತಗೊಂಡಿತು. ಬಿರುಗಾಳಿ ಬೀಸಿದ್ದರಿಂದ ಜನರು ಗ್ರಾಮಗಳಿಗೆ ತೆರಳಲು ಹರಸಾಹಸ ಪಟ್ಟರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.