ADVERTISEMENT

ಸಿಂಧನೂರು | ಇಸ್ಪೀಟ್ ಆಡಿದರೆ ಕಾನೂನು ಕ್ರಮ: ಇನ್‌ಸ್ಪೆಕ್ಟರ್ ಬಸವರಾಜ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 14:17 IST
Last Updated 30 ಅಕ್ಟೋಬರ್ 2024, 14:17 IST
ಸಿಂಧನೂರಿನ ಶಹರ ಪೊಲೀಸ್ ಠಾಣೆ ವತಿಯಿಂದ ಜಾಗೃತಿ ಮೂಡಿಸಲಾಯಿತು
ಸಿಂಧನೂರಿನ ಶಹರ ಪೊಲೀಸ್ ಠಾಣೆ ವತಿಯಿಂದ ಜಾಗೃತಿ ಮೂಡಿಸಲಾಯಿತು   

ಸಿಂಧನೂರು: ದೀಪಾವಳಿ ಹಬ್ಬದ ನೆಪದಲ್ಲಿ ಇಸ್ಪೀಟ್ ಆಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಹರ ಪೊಲೀಸ್ ಠಾಣೆ ಸಬ್‍ ಇನ್‌ಸ್ಪೆಕ್ಟರ್ ಬಸವರಾಜ ಹೇಳಿದರು.

ಬುಧವಾರ ದೀಪಾವಳಿ ಹಬ್ಬದ ಪ್ರಯುಕ್ತ ಆಟೊದಲ್ಲಿ ಧ್ವನಿವರ್ಧಕದ ಮೂಲಕ,‘ಇಸ್ಪೀಟ್ ಜೂಜಾಟ ಆಡುವುದು, ಆಡಿಸುವುದು ಅಕ್ಷಮ್ಯ ಅಪರಾಧವಾಗಿದೆ. ನಗರದಲ್ಲಿ ಇಸ್ಪೀಟ್ ಆಡುವುದು ಕಂಡುಬಂದರೆ ಶಹರ ಪೊಲೀಸ್ ಠಾಣೆ ದೂ.ಸಂ: 08535 220333, ಮೊ.ಸಂ: 9480803861ಗೆ ಮಾಹಿತಿ ನೀಡಿ ಜೂಜಾಟ ತಡೆಗೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಹೆಡ್ ಕಾನ್‌ಸ್ಟೆಬಲ್ ಸೋಮನಗೌಡ, ಸಮಾಜ ಸೇವಕ ಉಸ್ಮಾನಪಾಷಾ ಶಾ ಮಕಾಂದರ್ ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.