ADVERTISEMENT

ಮಸ್ಕಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 14:28 IST
Last Updated 23 ಜುಲೈ 2024, 14:28 IST
ಮಸ್ಕಿ ತಾಲ್ಲೂಕಿನ ಮಾರಲದಿನ್ನಿ ಬಳಿಯ ಮಸ್ಕಿ ಜಲಾಶಯ
ಮಸ್ಕಿ ತಾಲ್ಲೂಕಿನ ಮಾರಲದಿನ್ನಿ ಬಳಿಯ ಮಸ್ಕಿ ಜಲಾಶಯ   

ಮಸ್ಕಿ: ತಾಲ್ಲೂಕಿನ 7,500 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಕಲ್ಪಿಸುವ 0.5 ಟಿಎಂಸಿ ಅಡಿ (29 ಅಡಿ) ಸಾಮರ್ಥ್ಯದ ಮಸ್ಕಿ ಜಲಾಶಯದ ಒಳಹರಿವು ಹೆಚ್ಚಳವಾಗಿದೆ. ಮಂಗಳವಾರ 24 ಅಡಿ ನೀರು ಸಂಗ್ರಹವಾಗಿದೆ. 5 ಅಡಿ ನೀರು ಬಂದರೆ ಜಲಾಶಯ ಭರ್ತಿಯಾಗಿ ಹೆಚ್ಚಿನ ನೀರನ್ನು ಹಳ್ಳಕ್ಕೆ ಹರಿಬಿಡಲಾಗುತ್ತದೆ.

ಕೊಪ್ಪಳ ಹಾಗೂ ಗದಗ ಜಿಲ್ಲೆಗಳ ಕುಷ್ಟಗಿ, ಗಜೇಂದ್ರಗಡ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುವ ಸಾಧ್ಯತೆ ಇದೆ. ಜಲಾಶಯ ಭರ್ತಿಯಾದರೆ ಅಣೆಕಟ್ಟೆಯ ಗೇಟ್‌ಗಳ ಮೂಲಕ ನೀರನ್ನು ಮಸ್ಕಿಯ ಹಿರೇಹಳ್ಳಕ್ಕೆ ಬಿಡಬೇಕಾಗುತ್ತದೆ ಎಂದು ಯೋಜನೆಯ ಎಂಜಿನಿಯರ್ ದಾವುದ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಮಸ್ಕಿ ಜಲಾಶಯ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆ ಆರಂಭವಾಗಿದೆ. ಜಲಾಶಯ ಭರ್ತಿಯಾಗುವ ಹಂತ ತಲು‍ಪುತ್ತಿರುವುದಕ್ಕೆ ರೈತರು ಸಂತಸಗೊಂಡಿದ್ದಾರೆ. ಈ ಬಾರಿ ಉತ್ತಮ ಬೆಳೆ ಬೆಳೆಯುವ ನಿರೀಕ್ಷೆ ಹೊಂದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.