ADVERTISEMENT

ಜಾಲಹಳ್ಳಿ: ₹7 ಲಕ್ಷ ಮೌಲ್ಯದ ಮರಳು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2024, 15:48 IST
Last Updated 6 ಫೆಬ್ರುವರಿ 2024, 15:48 IST
ಜಾಲಹಳ್ಳಿಗೆ‌ ಸಮೀಪದ‌ ಲಿಂಗದಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಮರಳನ್ನು ಪೊಲೀಸರು ಮಂಗಳವಾರ ದಾಳಿ ನಡೆಸಿ ವಶಕ್ಕೆ‌ ಪಡೆದರು
ಜಾಲಹಳ್ಳಿಗೆ‌ ಸಮೀಪದ‌ ಲಿಂಗದಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಮರಳನ್ನು ಪೊಲೀಸರು ಮಂಗಳವಾರ ದಾಳಿ ನಡೆಸಿ ವಶಕ್ಕೆ‌ ಪಡೆದರು   

ಜಾಲಹಳ್ಳಿ: ಸಮೀಪದ ಲಿಂಗದಹಳ್ಳಿ ಗ್ರಾಮದ ಹತ್ತಿರ ಕೃಷ್ಣಾ ನದಿ ದಂಡೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಮರಳನ್ನು ಮಂಗಳವಾರ ಸ್ಥಳೀಯ ಪಿಎಸ್‌ಐ ಸುಜಾತಾ ನಾಯಕ ನೇತೃತ್ವದಲ್ಲಿ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ವಶಪಡಿಸಿಕೊಂಡ ಸುಮಾರು 928 ಮೆಟ್ರಿಕ್ ಟನ್ ಮರಳು ಸುಮಾರು ₹7.33 ಲಕ್ಷ ಮೌಲ್ಯ ಹೊಂದಿದೆ ಎಂದು ಪಿಎಸ್‌ಐ ತಿಳಿಸಿದ್ದಾರೆ.

ದಾಳಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಗೋಪಿ ಕೃಷ್ಣ, ಕಂದಾಯ ನಿರೀಕ್ಷಕ ದೇವರೆಡ್ಡಿ, ಪೋಲಿಸ್ ಸಿಬ್ಬಂದಿ ಅಯ್ಯಣ್ಣ, ದೇವರಾಜ, ಉಮೇಶ್ ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.