ADVERTISEMENT

ಏರಿದ ಜೋಳದ ಬೆಲೆ: ರೊಟ್ಟಿ ಪ್ರಿಯರಿಗೆ ಬಿಸಿ

ಜೋಳದ ಬೆಲೆ ಏರಿಕೆಯಿಂದ ರೊಟ್ಟಿ ತಿನ್ನುವ ಬದಲು ಗೋದಿ, ಸಜ್ಜೆ ಖರೀದಿಸಿದ್ದೇವೆರಮೇಶ ಉಳಿಮೇಶ್ವರ ಗ್ರಾಹಕ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 4:09 IST
Last Updated 28 ಮಾರ್ಚ್ 2023, 4:09 IST
   

ಹಟ್ಟಿ ಚಿನ್ನದಗಣಿ: ಜೋಳದ ಬೆಲೆ ಏರಿಕೆ ಯಿಂದ ರೊಟ್ಟಿ ಪ್ರಿಯರಿಗೆ ಕೈಸುಡುತ್ತಿದೆ.

ಹಟ್ಟಿ ಪಟ್ಟಣದಲ್ಲಿ ಜೋಳದ ಮಾರಾಟ ಜೋರಾಗಿ ನಡೆಯುತ್ತಿದ್ದು ವಾರದ ಸಂತೆಯಲ್ಲಿ ಜೋಳದ ಬೆಲೆ ಬಿಸಿಲಿ ನಂತೆ ದಿನದಿಂದ ದಿನಕ್ಕೆ ಏರಿಕೆಯಾ ಗುತ್ತಿದೆ, 1 ಕ್ವಿಂಟಾಲ್ ಜೋಳಕ್ಕೆ ₹5,600 ನಿಗದಿ ಪಡಿಸಿದ್ದಾರೆ. ಒಂದು ಏರು (42 ಸೇರು) ತೆಗೆದುಕೊಂಡರೆ ₹9500 ರಿಂದ ₹10 ಸಾವಿರ ಕೊಡ ಬೇಕು. ಇದರಿಂದ ಜೋಳವನ್ನು ಗ್ರಾಹ ಕರು ಖರೀದಿಸಲು ಹಿಂದೆಟು ಹಾಕು ವಂತೆ ಮಾಡುತ್ತಿದೆ ಜೋಳದ ಬೆಲೆ.

ಒಂದು ಸೇರು ಜೋಳಕ್ಕೆ ₹65 ರಿಂದ ₹70 ಆಗಿದೆ. ಜೋಳ ಬೆಳೆಯನ್ನು ಬೆಳೆದಿರುವ ರೈತರು ಖಷಿಯಲ್ಲಿ ಇದ್ದರೆ, ಕೊಂಡುಕೊಳ್ಳುವವರು ತೆಗೆದುಕೊಳ್ಳ ಬೇಕೊ ಬೆಡೋವೊ ಎಂದು ಯೋಚನೆ ಮಾಡುವಂತಾಗಿದೆ ಎನ್ನುತ್ತಾರೆ ಜನರು.

ADVERTISEMENT

ಜೋಳ ಬೆಲೆ ಏರಿಕೆಗೆ ಕಾರಣ:

ಗುರುಗುಂಟಾ ಹೋಬಳಿ ವ್ಯಾಪ್ತಿಯಲ್ಲಿ ಈ ಭಾರಿ ರೈತರು ಅತಿ ಹೆಚ್ಚಾಗಿ ತೊಗರಿ, ಸಜ್ಜೆ, ಕಡಲೆ ಬೆಳೆಗಳನ್ನು ಬೆಳದಿದ್ದಾರೆ. ಇದರಿಂದ ಜೋಳದ ಕೊರತೆ ಇರುವುರಿಂದ ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಿ ನಿಂಗಪ್ಪ ಹಟ್ಟಿ.

ಬೆಳಗಾವಿ, ಬಾಗಲಕೋಟ, ವಿಜಯಪುರ ಸೇರಿದಂತೆ ಇತರೆ ಜಿಲ್ಲೆಗಳಿಂದ ಜೋಳವನ್ನು ಮಾರಾಟ ಮಾಡಲು ಹಟ್ಟಿ ಪಟ್ಟಣಕ್ಕೆ ವ್ಯಾಪಾರಿಗಳು ಆಗಮಿಸುತ್ತಿದ್ದು ನಿತ್ಯ, 70 ರಿಂದ 100 ಕ್ವಿಂಟಾಲ್ ಜೋಳವನ್ನು ಮಾರಾಟ ಮಾಡಿ ಹೋಗುತ್ತಿದ್ದು ಕೆಲ ವ್ಯಾಪಾರಿಗಳು ಇದನ್ನೆ ಬಂಡವಾಳ ಮಾಡಿಕೊಂಡಿರುವ ವ್ಯಾಪಾರಿಗಳು, ಕಲಬೆರಕೆ, ಜೋಳಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ, ಎನ್ನುತ್ತರೆ ಇಲ್ಲಿನ ಜನರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.