ADVERTISEMENT

ರಾಯಚೂರು | ಮತದಾನ ಕೇಂದ್ರಕ್ಕೆ ವರ್ಲಿ ಚಿತ್ರಗಳ ಸ್ಪರ್ಶ 

​ಪ್ರಜಾವಾಣಿ ವಾರ್ತೆ
Published 7 ಮೇ 2023, 7:27 IST
Last Updated 7 ಮೇ 2023, 7:27 IST
ಹಟ್ಟಿ ಪಟ್ಟಣದ ಮತದಾನ ಕೇಂದ್ರಕ್ಕೆ ವರ್ಲಿ ಚಿತ್ರಕಲೆ ಸ್ಪರ್ಶ ನೀಡಲಾಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ. 
ಹಟ್ಟಿ ಪಟ್ಟಣದ ಮತದಾನ ಕೇಂದ್ರಕ್ಕೆ ವರ್ಲಿ ಚಿತ್ರಕಲೆ ಸ್ಪರ್ಶ ನೀಡಲಾಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ.    

ಹಟ್ಟಿಚಿನ್ನದಗಣಿ : ಮತದಾನ ದಿನವನ್ನು ಹಬ್ಬದ ರೀತಿಯಲ್ಲಿ ಆಚರಣೆ ಹಾಗೂ ಮತದಾನ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್‌ ಸಮಿತಿಯು ಕ್ಷೇತ್ರದ ಕೆಲ ಮತದಾನ ಕೇಂದ್ರಗಳಿಗೆ ವರ್ಲಿ ಚಿತ್ರಕಲೆ ಸ್ಪರ್ಶ ನೀಡಲಾಗಿದ್ದು, ಮತಗಟ್ಟೆಗಳು ಎಲ್ಲರ ಗಮನ ಸೆಳೆಯುತ್ತಿವೆ.

ಗುರುಗುಂಟಾ ಹೋಬಳಿ ವ್ಯಾಪ್ತಿಯ ಮತದಾನ ಕೇಂದ್ರಕ್ಕೆ ಕೇಂದ್ರಗಳಿಗೆ ವರ್ಲಿ ಚಿತ್ರಕಲೆ ಸ್ಪರ್ಶ ನೀಡಲಾಗಿದೆ. ಹಟ್ಟಿ ಪಟ್ಟಣದಲ್ಲಿ 28 ಕೇಂದ್ರ ಹಾಗೂ ಗುರುಗುಂಟಾ ಗ್ರಾಮದಲ್ಲಿ 12 ಮತಗಟ್ಟೆ ಕೇಂದ್ರ ಸೇರಿ ಗುರುಗುಂಟಾ ಹೋಬಳಿಯಲ್ಲಿ ಒಟ್ಟು 112 ಮತಗಟ್ಟೆ ಕೇಂದ್ರಗಳಿಗೆ ಶಿಕ್ಷಣ ಇಲಾಖೆಯ ಚಿತ್ರಕಲಾ ಶಿಕ್ಷಕರ ತಂಡದಿಂದ ವರ್ಲಿ ಚಿತ್ರಕಲೆಯನ್ನು ಬಿಡಿಸಲಾಗಿದೆ.

ನಾಡಿನ ಸಂಪ್ರದಾಯಿಕ ಕಲೆ, ಸಂಸ್ಕ್ರತಿ ಬಿಂಬಿಸುವ ಕಲೆಯನ್ನು ಬಿಡಿಸಲಾಗಿದ್ದು, ಮತಗಟ್ಟೆ ಕೇಂದ್ರಗಳು ಜನರನ್ನು ಆಕರ್ಷಿಸುತ್ತಿವೆ. ಮತದಾನ ಮಾಡಲು ಬರುವವರು ಉತ್ಸಾಹದಿಂದ ಮತದಾನ ಮಾಡಬೇಕು. ಹಬ್ಬದ ರೀತಿಯ ಸಂಭ್ರಮವನ್ನು ತರುವ ಉದ್ಧೇಶದಿಂದ ಮತದಾನ ಕೇಂದ್ರಗಳಿಗೆ ವರ್ಲಿ ಚಿತ್ರಕಲೆಯನ್ನು ಬಿಡಿಸಲಾಗಿದೆ ಎಂದು ಚುನಾವಣಾ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.