ADVERTISEMENT

ರಾಯಚೂರು: ಮಹಾದೇವ ಪಾಟೀಲ, ಮಲ್ಲಣ್ಣ ಹರವಾಳರಿಗೆ ಕಸಾಪ ದತ್ತಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2024, 5:04 IST
Last Updated 1 ಮಾರ್ಚ್ 2024, 5:04 IST
<div class="paragraphs"><p>ಮಹಾದೇವ ಪಾಟೀಲ ಮತ್ತು&nbsp;ಮಲ್ಲಣ್ಣ ಶಿವರಾಯಗೌಡ ಹರವಾಳ</p></div>

ಮಹಾದೇವ ಪಾಟೀಲ ಮತ್ತು ಮಲ್ಲಣ್ಣ ಶಿವರಾಯಗೌಡ ಹರವಾಳ

   

ರಾಯಚೂರು: ಕನ್ನಡ ಸಾಹಿತ್ಯ ಪರಿಷತ್ತು 2022ನೇ ಸಾಲಿನ ವಿವಿಧ ಪುಸ್ತಕ ದತ್ತಿ ಪ್ರಶಸ್ತಿ ಪ್ರಕಟಿಸಿದೆ.

ರಾಯಚೂರು ಜಿಲ್ಲೆಯ ಮಹಾದೇವ ಪಾಟೀಲ ಅವರ ‘ಸುಡುವ ತಂಗಾಳಿ’ ಕೃತಿಗೆ, ‘ಶ್ರೀಮತಿ ಪಂಪಮ್ಮ -ಶರಣೇಗೌಡ ವಿರೂಪಾಪುರ ದತ್ತಿ ಪ್ರಶಸ್ತಿ’ ಹಾಗೂ ಮಲ್ಲಣ್ಣ ಶಿವರಾಯಗೌಡ ಹರವಾಳ ಅವರ ‘ಜಾನಪದವೆ ಜ್ಞಾನಪದ’ ಕೃತಿಗೆ, ‘ಅಕ್ಕಮ್ಮ ಗಿರಿಗೌಡ ದತ್ತಿ ಪ್ರಶಸ್ತಿ’ ಪ್ರಕಟಿಸಲಾಗಿದೆ.

ADVERTISEMENT

ಮಾರ್ಚ್ 3ರಂದು ಬೆಂಗಳೂರಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕಸಾಪ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.