ಕವಿತಾಳ: ಪಟ್ಟಣದ ವಿವಿಧ ಶಾಲೆಗಳು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶುಕ್ರವಾರ ಶಾಲೆಗಳು ಪುನರ್ ಆರಂಭವಾಗಿದ್ದು ಮಕ್ಕಳು ಕಡಿಮೆ ಸಂಖ್ಯೆಯಲ್ಲಿ ಆಗಮಿಸಿದರೂ ಸಂಭ್ರಮದಿಂದ ಆಗಮಿಸಿದ್ದು ಕಂಡುಬಂತು.
ಇಲ್ಲಿನ ಉನ್ನತೀಕರಿಸಿದ ಕನ್ಯಾ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. ಎರಡು ಜೊತೆ ಸಮವಸ್ತ್ರ ಮತ್ತು ಪಠ್ಯ ಪುಸ್ತಕ ವಿತರಿಸಲಾಯಿತು. ಮುಖ್ಯ ಶಿಕ್ಷಕ ರುದ್ರಪ್ಪ ಲೋಕಾಪುರ, ಶಿಕ್ಷಕರಾದ ಬಸವರಾಜ ಪಲಕನಮರಡಿ, ಶರಣಮ್ಮ, ಸಂಗಮ್ಮ, ಭಾರತಿ, ಪ್ರೀತಿ ಉಪಸ್ಥಿತರಿದ್ದರು.
ಸಮೀಪದ ವಟಗಲ್ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಶಾಲೆಯಲ್ಲಿ ತಳಿರು, ತೋರಣ ಕಟ್ಟಿ ಅಲಂಕರಿಸಲಾಗಿತ್ತು ಮಕ್ಕಳಿಗೆ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. ಸಮವಸ್ತ್ರ, ಪಠ್ಯ ಪುಸ್ತಕ ವಿತರಿಸಲಾಯಿತು, 5, 6, 7 ಮತ್ತು 8ನೇ ತರಗತಿ ಬಾಲಕಿಯರಿಗೆ ಈ ಬಾರಿ ಚೂಡಿದಾರ್ ವಿತರಣೆ ವಿಶೇಷವಾಗಿತ್ತು. ಮುಖ್ಯ ಶಿಕ್ಷಕಿ ಪುಷ್ಪಾ ಪತ್ತಾರ ಮತ್ತು ಶಿಕ್ಷಕರು ಉಪಸ್ಥಿತರಿದ್ದರು.
ಹಿರೇದಿನ್ನಿ ಮತ್ತು ಹಿರೇಬಾದರದಿನ್ನಿ ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯ ಪುಸ್ತಕ ಮತ್ತು ಸಮವಸ್ತ್ರ ವಿತರಿಸಲಾಯಿತು. ಬಹುತೇಕ ಶಾಲೆಗಳಲ್ಲಿ ಮಕ್ಕಳಿಗೆ ಮದ್ಯಾಹ್ನ ಸಿರಾ, ಅನ್ನ ಸಾಂಬಾರು ಊಟ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.