ADVERTISEMENT

ಸಮಯಕ್ಕೆ ಬಾರದ ಬಸ್‌; ಪರದಾಟ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 5:25 IST
Last Updated 15 ನವೆಂಬರ್ 2024, 5:25 IST
ಕವಿತಾಳ ಸಮೀಪದ ಹಾಲಾಪುರದಲ್ಲಿ ಬಸ್‌ ಹತ್ತಲು ಪರದಾಡುತ್ತಿರುವ ವಿದ್ಯಾರ್ಥಿಗಳು
ಕವಿತಾಳ ಸಮೀಪದ ಹಾಲಾಪುರದಲ್ಲಿ ಬಸ್‌ ಹತ್ತಲು ಪರದಾಡುತ್ತಿರುವ ವಿದ್ಯಾರ್ಥಿಗಳು   

ಕವಿತಾಳ: ಮಸ್ಕಿ ತಾಲ್ಲೂಕಿನ ಹಾಲಾಪುರ ಗ್ರಾಮದಲ್ಲಿ ಸಮಯಕ್ಕೆ ಸರಿಯಾಗಿ ಬಸ್‌ಗಳು ಬಾರದ ಕಾರಣ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಪರದಾಡುವಂತಾಗಿದೆ.

ಹಾಲಾಪುರ, ಯದ್ದಲದಿನ್ನಿ, ರಾಮಲದಿನ್ನಿ, ತುಗ್ಗಲದಿನ್ನಿ, ಶಂಕರ ನಗರ ಕ್ಯಾಂಪ್‌ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ವಿದ್ಯಾರ್ಥಿಗಳು ನಿತ್ಯ ಶಾಲೆ– ಕಾಲೇಜುಗಳಿಗೆ ಮಸ್ಕಿ, ಕವಿತಾಳ ಮತ್ತು ಲಿಂಗಸುಗೂರು ಪಟ್ಟಣಗಳಿಗೆ ಹೋಗುತ್ತಾರೆ. ಆದರೆ ಮಸ್ಕಿ–ಕವಿತಾಳ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳು ಸಮಯಕ್ಕೆ ಸರಿಯಾಗಿ ಬಾರದ ಕಾರಣ ಪರದಾಡುವಂತಾಗಿದೆ ಮತ್ತು ಬಸ್‌ ಕೊರತೆಯಿಂದ ಬಾಗಿಲಲ್ಲಿ ಜೋತು ಬಿದ್ದು ಪ್ರಯಾಣಿಸುವಂತಾಗಿದೆ ಎಂದು ವಿದ್ಯಾರ್ಥಿಗಳು ದೂರಿದರು.

ವಿವಿಧ ಗ್ರಾಮಗಳು ಮತ್ತು ಕ್ಯಾಂಪ್‌ಗಳಿಂದ ಹಾಲಾಪುರಕ್ಕೆ ಬರುವ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಹಾಲಾಪುರದಲ್ಲಿ ಕಾಯ್ದು ನಿಲ್ಲಬೇಕಿದೆ, ಗ್ರಾಮದಲ್ಲಿ ಬಸ್‌ ಶೆಲ್ಟರ್‌ ಇಲ್ಲದ ಕಾರಣ ಅಂಗಡಿ, ಹೊಟೇಲ್‌ಗಳ ಮುಂದೆ ನಿಂತು ಕಾಯಬೇಕಿದೆ. ಹೀಗಾಗಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಮುಜುಗರ ಉಂಟಾಗುತ್ತದೆ ಎಂದು ತುಗ್ಗಲದಿನ್ನಿ ಗ್ರಾಮದ ಬಸ್ಸಮ್ಮ ಹೇಳಿದರು.

ADVERTISEMENT

ಉಪ ಕಾಲುವೆ ಹತ್ತಿರ ಬಸ್‌ ಶೆಲ್ಟರ್‌ ನಿರ್ಮಾಣ ಮಾಡುವುದು ಮತ್ತು ಶಾಲಾ ಕಾಲೇಜು ಸಮಯಕ್ಕೆ ಸರಿಯಾಗಿ ಬಸ್‌ ಸಂಚಾರಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಸಿದ್ದಾರ್ಥ ಪಾಟೀಲ್‌ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.