ADVERTISEMENT

ಹಟ್ಟಿ ಚಿನ್ನದಗಣಿ | ನಾಯಿ ತಿಂದು ಹಾಕಿದ ಚಿರತೆ: ಭಯದಲ್ಲಿ ಗ್ರಾಮಸ್ಧರು

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 16:04 IST
Last Updated 27 ಅಕ್ಟೋಬರ್ 2024, 16:04 IST

ಹಟ್ಟಿ ಚಿನ್ನದಗಣಿ: ಆನ್ವರಿ ಗ್ರಾಮದ ಬಂಡಿಹಳ್ಳದ ಹತ್ತಿರ ಭಾನುವಾರ ಚಿರತೆ ಕಂಡು ಬಂದಿದ್ದು ಜನರು ಭಯದಲ್ಲಿ ಇದ್ದಾರೆ.

ದನ, ಕುರಿಕಾಯುವವರು ಹಾಗೂ ಜಮೀನಿಗೆ ತೆರಳುವ ಜನರು ಎಚ್ಚರದಿಂದ ಇರಬೇಕು. ರೈತರು ಜಮೀನಿಗೆ ಹೋಗುವಾಗ ಎಚ್ಚರದಿಂದ ಇರಿ ಎನ್ನುತ್ತಾರೆ ಅರಣ್ಯಾಧಿಕಾರಿಗಳು.

ಕಡ್ಡೋಣಿ, ಆನ್ವರಿ ,ತಪ್ಪಲದೊಡ್ಡಿ, ಹುಸೇನಪೂರ, ಕವಿತಾಳ, ವಟಗಕ್, ಯಕ್ಲಾಸಪೂರ, ಅರಣ್ಯ ಪ್ರದೇಶವಾಗಿದ್ದು ಒಬ್ಬಟಿಯಾಗಿ ಯಾರು ತಿರುಗಾಡದಂತೆ ಎಚ್ಚರದಿಂದ ಇರಬೇಕು ಎಂದು ಅರಣ್ಯ ಇಲಾಖೆಯವರು ತಿಳಿಸಿದ್ದಾರೆ.

ADVERTISEMENT

‘ಚಿರತೆ ಕಂಡು ಬಂದರೆ ಅರಣ್ಯ ಅಧಿಕಾರಿಗಳಿಗೆ ಗ್ರಾಮಸ್ಧರು ಮಾಹಿತಿ ನೀಡಿ‌ ಸಹಕಾರ ನೀಡಬೇಕು, ಆದಷ್ಟು ಬೇಗನೆ ಚಿರತೆ ಹಿಡಿಯಲು ವ್ಯೆವಸ್ಧೆ ಮಾಡಲಾಗುವುದು’ ಎನ್ನುತ್ತಾರೆ ಅರಣ್ಯ ಅಧಿಕಾರಿಗಳು.

ಸ್ಧಳಕ್ಕೆ ಕವಿತಾಳ ಅರಣ್ಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.