ADVERTISEMENT

ಲಿಂಗಸುಗೂರು: 18 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 15:47 IST
Last Updated 24 ಆಗಸ್ಟ್ 2024, 15:47 IST
<div class="paragraphs"><p>ಬಂಧನ( ಸಾಂಕೇತಿಕ ಚಿತ್ರ)</p></div>

ಬಂಧನ( ಸಾಂಕೇತಿಕ ಚಿತ್ರ)

   

ಲಿಂಗಸುಗೂರು: ತಾಲ್ಲೂಕಿನ ಐದಭಾವಿ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೊದಲನೇ ಆರೋಪಿ ಲಕ್ಷ್ಮಣ ಬಸಪ್ಪ ಗುಡದನಾಳ ಸೇರಿ 18 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹5,500 ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಬಿ.ಬಿ.ಜಕಾತಿ ಆದೇಶ ಹೊರಡಿಸಿದ್ದಾರೆ.

ಲಿಂಗಸುಗೂರು ಠಾಣೆ ವ್ಯಾಪ್ತಿಯ ಐದಭಾವಿ ಗ್ರಾಮದಲ್ಲಿ ದುರುಗಮ್ಮ ದೇವಿ ಜಾತ್ರೆ ಸಂದರ್ಭದಲ್ಲಿ 2010 ಸೆಪ್ಟೆಂಬರ್ 6ರಂದು ಅಪರಾಧಿಗಳು ಹಳೆ ದ್ವೇಷದಿಂದ ಶರಣಪ್ಪ ಗೋಪಾಲಪ್ಪಗೌಡ ಅವರನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದರು.

ADVERTISEMENT

ಸಿಪಿಐಗಳಾದ ಪ್ರಭುಗೌಡ ಮಸ್ಕಿ ಮತ್ತು ಜಿ.ಆರ್. ಶಿವಮೂರ್ತಿ ಪ್ರಕರಣದ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಶುಕ್ರವಾರ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ.ವಗೋಪಾಲರಾವ್ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.