ಲಿಂಗಸುಗೂರು: ‘ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ವಿವಿಧ ಧರ್ಮ, ಜಾತಿ ಸಮುದಾಯಗಳನ್ನು ಒಂದುಗೂಡಿಸಿ ಸುಭದ್ರ ರಾಷ್ಟ್ರ, ಐಕ್ಯತೆಗೆ ಎಷ್ಟೆಲ್ಲಾ ಕಾನೂನುಗಳು ರಚನೆಯಾಗಿದೆ. ಆ ಎಲ್ಲಾ ಕಾನೂನುಗಳಿಗೆ ಸಂವಿಧಾನವೇ ತಾಯಿ ಬೇರು’ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಉಂಡಿ ಮಂಜುಳಾ ಶಿವಪ್ಪ ಹೇಳಿದರು.
ಶನಿವಾರ ಬಸಮ್ಮ ಗುರುಲಿಂಗಪ್ಪ ಕಾನೂನು ಮಹಾ ವಿದ್ಯಾಲಯದಲ್ಲಿ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಹುಬ್ಬಳ್ಳಿಯ ರಾಜ್ಯ ಕಾನೂನು ಮಹಾವಿದ್ಯಾಲಯ ಸಹಯೋಗದಲ್ಲಿ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಕೆ. ಅಂಬಣ್ಣ ಮಾತನಾಡಿ, ‘ಕಾನೂನು ಸೇವಾ ಪ್ರಾಧಿಕಾರ ಆರ್ಥಿಕವಾಗಿ ಹಿಂದುಳಿದ ವರ್ಗದವರು ಸೇರಿದಂತೆ ಅಸಹಾಯಕರಿಗೆ ಉಚಿತ ಕಾನೂನು ನೆರವು ನೀಡಲಿದೆ. ಪ್ರಾಧಿಕಾರದ ನಿಯಮಗಳಡಿ ಅರ್ಜಿ ಸಲ್ಲಿಸುವ ಪ್ರತಿಯೊಬ್ಬರಿಗೂ ಉಚಿತ ಸೇವೆ ನೀಡಲಿದ್ದೇವೆ’ ಎಂದರು.
ಉಟಗನೂರು ಬಸವಲಿಂಗ ತಾತಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಂಜೀವಕುಮಾರ ಕಂದಗಲ್ಲ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಭೂಪನಗೌಡ ಕರಡಕಲ್ಲ. ವಕೀಲರಾದ ಗಿರೀಶ ಜೋಶಿ, ರುದ್ರಪ್ಪ ಯಲಿಗಾರ, ಮೋಹಿನ್ ಪಟೇಲ್, ಗಣೇಶ ಮಾಲಿಗೌಡ, ಪ್ರಾಚಾರ್ಯ ಅಮರೇಶ ಗೌಡೂರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.