ಕವಿತಾಳ (ರಾಯಚೂರು): ಸಿರವಾರ ತಾಲ್ಲೂಕಿನ ಮಲ್ಲನಗುಡ್ಡ ಕ್ಯಾಂಪ್ ರೈತ ಪಾಪಾರಾವ್ ಅವರಿಗೆ ಸೇರಿದ ಭತ್ತದ ಚೀಲಗಳನ್ನು ಸಾಗಿಸುತ್ತಿದ್ದ ಲಾರಿಯು ಸೊಸೈಟಿ ಕ್ಯಾಂಪ್ ಬಳಿ ಭಾನುವಾರ ಮಗುಚಿದ್ದು, ಭತ್ತದ ಚೀಲಗಳು ನೀರುಪಾಲಾಗಿವೆ.
ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳದ ಸೇತುವೆ ಮೇಲೆ ನೀರು ಹರಿದುಹೋಗಿದೆ. ಲಾರಿ ಸಂಚರಿಸುವಾಗ ಸೇತುವೆ ಕುಸಿದಿರುವುದು ಲಾರಿ ಮಗುಚುವುದಕ್ಕೆ ಕಾರಣ. 350 ಕ್ಕೂ ಹೆಚ್ಚು ಭತ್ತದ ಚೀಲಗಳು ಲಾರಿಯಲ್ಲಿದ್ದವು. 100 ಕ್ಕೂ ಹೆಚ್ಚು ಚೀಲಗಳು ನೀರಿನಲ್ಲಿ ಕೊಚ್ಚಿಹೋಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.