ADVERTISEMENT

ಮಂತ್ರಾಲಯ: ₹3.69 ಕೋಟಿ ಕಾಣಿಕೆ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 0:27 IST
Last Updated 30 ಜುಲೈ 2024, 0:27 IST
ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಹುಂಡಿ ತೆರೆದು ನಗದು ಎಣಿಕೆ ಮಾಡಿದ ಮಠದ ಸಿಬ್ಬಂದಿ
ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಹುಂಡಿ ತೆರೆದು ನಗದು ಎಣಿಕೆ ಮಾಡಿದ ಮಠದ ಸಿಬ್ಬಂದಿ   

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಹುಂಡಿಯನ್ನು ಸೋಮವಾರ ತೆರೆದು ನಗದು ಎಣಿಕೆ ಮಾಡಲಾಗಿದ್ದು, 32 ದಿನಗಳ ಅವಧಿಯಲ್ಲಿ ₹ 3.69 ಕೋಟಿ ನಗದು ಕಾಣಿಕೆಯಾಗಿ ಬಂದಿದೆ.

₹ 3,61,21,649 ನಗದು, ₹ 8,13,540 ನಾಣ್ಯಗಳು ಸೇರಿ ಒಟ್ಟು ₹ 3,69,35,189 ನಗದು, ಚಿನ್ನದ ಹಾಗೂ ಬೆಳ್ಳಿಯ ವಸ್ತುಗಳ ಭಕ್ತರಿಂದ ಕಾಣಿಕೆ ರೂಪದಲ್ಲಿ ಬಂದಿದ್ದು, ಮಠದ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುವುದು ಎಂದು ಮಠದ ವ್ಯವಸ್ಥಾಪಕ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT