ADVERTISEMENT

ರಾಯಚೂರು | ಮಂತ್ರಾಲಯ: ₹3.41 ಕೋಟಿ ಕಾಣಿಕೆ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 16:28 IST
Last Updated 27 ಜೂನ್ 2024, 16:28 IST
ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ ಹುಂಡಿಯಲ್ಲಿ ಒಂದು ತಿಂಗಳ ಅವಧಿಯಲ್ಲಿ ಸಂಗ್ರಹವಾಗಿದ್ದ ಕಾಣಿಕೆಯ ಹಣವನ್ನು ಮಠದ ಸಿಬ್ಬಂದಿ ಎಣಿಕೆ ಮಾಡಿದರು
ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ ಹುಂಡಿಯಲ್ಲಿ ಒಂದು ತಿಂಗಳ ಅವಧಿಯಲ್ಲಿ ಸಂಗ್ರಹವಾಗಿದ್ದ ಕಾಣಿಕೆಯ ಹಣವನ್ನು ಮಠದ ಸಿಬ್ಬಂದಿ ಎಣಿಕೆ ಮಾಡಿದರು   

ರಾಯಚೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ ಹುಂಡಿಯಲ್ಲಿ ಒಂದು ತಿಂಗಳ ಅವಧಿಯಲ್ಲಿ ಒಟ್ಟು ₹3.41 ಕೋಟಿ ನಗದು ಕಾಣಿಕೆ ಸಂಗ್ರಹವಾಗಿದೆ. 

ಮಠದಲ್ಲಿ ಸಂಗ್ರಹವಾಗಿದ್ದ ಕಾಣಿಕೆಯ ಹಣವನ್ನು ಮಠದ ಸಿಬ್ಬಂದಿ ಗುರುವಾರ ಎಣಿಕೆ ಮಾಡಿದರು. ₹3,34,92,045 ನಗದು, ₹6,54,400 ಮೊತ್ತದ ನಾಣ್ಯಗಳು ಸೇರಿ ಒಟ್ಟು ₹3,41,46,445 ನಗದು, 82 ಗ್ರಾಂ ಚಿನ್ನ ಹಾಗೂ 2,570 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ ಎಂದು ಮಠದ ಪ್ರಧಾನ ವ್ಯವಸ್ಥಾಪಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT