ADVERTISEMENT

ವೈದ್ಯ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ ಮಂತ್ರಾಲಯ ಶ್ರೀ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2020, 13:54 IST
Last Updated 22 ಮಾರ್ಚ್ 2020, 13:54 IST
ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಮಹಾದ್ವಾರದ ಎದುರು ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹಾಗೂ ಮಠದ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ದೇಶದ ವೈದ್ಯೋಪಚಾರದಲ್ಲಿ ನಿರತರಾದವರಿಗೆ ಕೃತಜ್ಞತಾ ಪೂರ್ವಕ ಬೆಂಬಲ ಸೂಚಿಸಿದರು
ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಮಹಾದ್ವಾರದ ಎದುರು ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹಾಗೂ ಮಠದ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ದೇಶದ ವೈದ್ಯೋಪಚಾರದಲ್ಲಿ ನಿರತರಾದವರಿಗೆ ಕೃತಜ್ಞತಾ ಪೂರ್ವಕ ಬೆಂಬಲ ಸೂಚಿಸಿದರು   

ರಾಯಚೂರು: ’ಮಹಾಮಾರಿ ಕೊರೊನಾ ವೈರಸ್‌ ವಿರುದ್ಧ ಜನರ ಪ್ರಾಣ ಉಳಿಸಲು ತಮ್ಮ ಪ್ರಾಣವನ್ನು ಲೆಕ್ಕಿಸದೆ ವೈದ್ಯಕೀಯ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಎಲ್ಲ ವೈದ್ಯರು, ವೈದ್ಯ ಸಿಬ್ಬಂದಿಗೆ ಮಠದ ವತಿಯಿಂದ ಕೃತಜ್ಞತಾ ಪೂರ್ವಕ ಬೆಂಬಲ ವ್ಯಕ್ತಪಡಿಸುತ್ತಿದ್ದೇವೆ’ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದರು

ಶೀಘ್ರಗತಿಯಲ್ಲಿ ಎಲ್ಲ ಪ್ರಯತ್ನಗಳು ಫಲಿಸಲಿ. ಈ ಮಹಾವ್ಯಾಧಿಯು ಪ್ರತಿಯೊಂದು ಗ್ರಾಮ ಗ್ರಾಮದಿಂದ ಹಾಗೂ ವಿಶ್ವದಿಂದ ಪರಿಹಾರವಾಗಲಿ. ಎಲ್ಲರ ಜೀವನವೂ ಸುಖಮಯವಾಗಲಿ ಎಂದು ಭಗವಂತನದಲ್ಲಿ ಪ್ರಾರ್ಥಿಸುತ್ತೇವೆ ಎಂದು ತಿಳಿಸಿದರು.

ಪ್ರಧಾನಮಂತ್ರಿ ಅವರ ಕರೆಗೆ ಮೇರೆಗೆ ದೇಶದ ಪ್ರತಿಯೊಂದು ಭಾಗದಿಂದ ವೈದ್ಯೋಪಚಾರ ಮಾಡಿದವರಿಗೆ ಬೆಂಬಲ ವ್ಯಕ್ತಪಡಿಸಿ ಜನರು ಚಪ್ಪಾಳೆ ತಟ್ಟಿದ್ದಾರೆ. ಅದೇ ರೀತಿ ಮಠದಲ್ಲೂ ಕೂಡಾ ನಗಾರಿ ಮೊಳಗಿಸಿ, ವಾದ್ಯ ನುಡಿಸಿ, ಚಪ್ಪಾಳೆ ತಟ್ಟುವ ಮೂಲಕ ವೈದ್ಯೋಪಚಾರ ಮಾಡಿದವರಿಗೆ ಬೆಂಬಲ ಸೂಚಿಸಲಾಗಿದೆ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.