ರಾಯಚೂರು: ‘ಪೇಜಾವರ ಶ್ರೀಗಳ ಆಶಯ, ಹೃದಯವೈಶಾಲ್ಯತೆ, ವಿಧ್ವತ್ತು, ಸದಾಚಾರ, ಅವರ ತಪಸ್ಸು. ಎಲ್ಲವೂ ಅನುಕರಣೀಯವಾಗಿದೆ’ ಎಂದು ಮಂತ್ರಾಲಯದರಾಘವೇಂದ್ರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಹೇಳಿದರು.
ದೇಶದ ಉದ್ದಗಲಕ್ಕೂ ಸನಾತನ ಹಿಂದುಧರ್ಮ ಪ್ರಚಾರ ಹಾಗೂ ಮಧ್ವಾಚಾರ್ಯರ ತತ್ವಜ್ಞಾನ ಪ್ರಚಾರವನ್ನು ಮಾಡಿಕೊಂಡು ಬಂದಿದ್ದರು. ಜನಸಾಮಾನ್ಯರಲ್ಲಿಯೂ ಕೂಡಾ ಮನಮುಟ್ಟುವ ಘನವ್ಯಕ್ತಿತ್ವ ಪೇಜಾವರ ಶ್ರೀಗಳದ್ದಾಗಿತ್ತು. ಅವರು ಇಹಲೋಕ ತ್ಯಜಿಸಿದ್ದರಿಂದ ಅತ್ಯಂತ ಖೇದವಾಗಿದೆ ಎಂದರು.
ಎಂಟು ದಶಕಗಳಿಗೂ ಮಿಗಿಲು ಸನ್ಯಾಸತ್ವವನ್ನು ಸಕ್ರಮವಾಗಿ ಸಾಗಿಸಿರುವ ಜ್ಞಾನವಯೋವೃದ್ಧರು, ನಾಡಿಗೆ, ದೇಶಕ್ಕೆ ವಿದ್ವಾಂಸರನ್ನು ಕೊಡುಗೆ ನೀಡಿದ್ದಾರೆ. ದೀನ, ದಲಿತರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ ಎಂದು ತಿಳಿಸಿದರು. ಮಂತ್ರಾಲಯದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಪೇಜಾವರ ಶ್ರೀ ಭಾಗಿಯಾಗಿದ್ದಾರೆ ಎಂದು ಸ್ಮರಿಸಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.