ರಾಯಚೂರು: ಸೂರ್ಯದೇವನ ಜಯಂತಿ ರಥಸಪ್ತಮಿ ದಿನವಾದ ಗುರುವಾರ, ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ವಿಶೇಷ ಪೂಜೆ ಹಾಗೂ ಏಕಕಾಲಕ್ಕೆ ಐದು ವಿಧದ ರಥೋತ್ಸವ ನೆರವೇರಿಸಲಾಯಿತು.
ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.
ಉತ್ತರಾರ್ಧಗೋಳದಲ್ಲಿರುವ ಸೂರ್ಯನು ಇದೇ ದಿನದಂದು ಜಗತ್ತನ್ನು ಬೆಳಗಲು ಆರಂಭಿಸಿದ ಎನ್ನುವುದು ರಥಸಪ್ತಮಿ ಆಚರಣೆಯಲ್ಲಿರುವ ನಂಬಿಕೆ. ರಥಸಪ್ತಮಿ ಬಳಿಕ ಸೂರ್ಯ ಹೆಚ್ಚು ಪ್ರಕಾಶಮಾನವಾಗಿ ಬೇಸಿಗೆ ಆರಂಭವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.