ADVERTISEMENT

ಮಸ್ಕಿ: ಜಂಬೂ ಸವಾರಿ, ಮಹಿಳೆಯರಿಂದ ರಥೋತ್ಸವ ನಾಳೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 19:33 IST
Last Updated 15 ಅಕ್ಟೋಬರ್ 2024, 19:33 IST
ಭ್ರಮರಾಂಬದೇವಿ
ಭ್ರಮರಾಂಬದೇವಿ   

ಮಸ್ಕಿ: ನವರಾತ್ರಿ ನಿಮಿತ್ತ ಭ್ರಮರಾಂಬ ದೇವಸ್ಥಾನದಲ್ಲಿ ನಡೆಯುತ್ತಿರುವ 54ನೇ ವರ್ಷದ ಮಹಾದೇವಿ ಪುರಾಣದ ಮಂಗಲೋತ್ಸವ ಅ.17 ರಂದು ನಡೆಯಲಿದೆ.

ಅಂದು ಬೆಳಿಗ್ಗೆ 8ಗಂಟೆಗೆ ಗಂಗಾಸ್ಥಳದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. 8.30ಕ್ಕೆ ದೇವಿಯನ್ನು ಹೊತ್ತ ಅಂಬಾರಿ ಮೆರವಣಿಗೆ ನಡೆಯಲಿದ್ದು ಸಾವಿರ ಮಹಿಳೆಯರು ಕುಂಭ ಹೊತ್ತು ಭಾಗಿಯಾಗಲಿದ್ದಾರೆ.

ದೇವಿಯ ಉತ್ಸವ ಮೂರ್ತಿಯನ್ನು ಈ ಬಾರಿ ಹಂಪಿಯ ವಿರುಪಾಕ್ಷೇಶ್ವರ ದೇವಸ್ಥಾನದ ‘ಲಕ್ಷ್ಮೀ’ ಆನೆ ಹೊರಲಿದೆ. ಅಶೋಕ ವೃತ್ತದಲ್ಲಿ ಗಚ್ಚಿನಮಠದ ವರರುದ್ರಮುನಿ ಸ್ವಾಮಿಜಿ ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ. ಶಾಸಕ ಆರ್. ಬಸನಗೌಡ ತುರುವಿಹಾಳ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಉಪಾಧ್ಯಕ್ಷೆ ಗೀತಾ ಶಿವರಾಜ ಸೇರಿದಂತೆ ಪುರಸಭೆ ಸದಸ್ಯರು, ತಾಲ್ಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ADVERTISEMENT

ಮದ್ಯಾಹ್ನ 12ರಿಂದ ಭ್ರಮರಾಂಬದೇವಿಗೆ ವಿಗ್ರಹಕ್ಕೆ ಅಭಿಷೇಕ ಸೇರಿದಂತೆ ವಿವಿಧ ದಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಬಳಿಕ ಭಕ್ತರಿಗೆ ಪ್ರಸಾದ ವ್ಯವಸ್ಥೆ ನಡೆಯಲಿದೆ. ಸಂಜೆ 5 ಗಂಟೆಗೆ ಭ್ರಮರಾಂಬ ದೇವಿಯ ರಥದ ಮೂಲಕ ಉತ್ಸವಕ್ಕೆ ತೆರೆ ಬೀಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.