ಮಸ್ಕಿ: ಅಶೋಕನ ಶಿಲಾಶಾಸನದಿಂದ ಪ್ರಸಿದ್ಧಿ ಪಡೆದ ಮಸ್ಕಿಯಲ್ಲಿ ಕಲ್ಲು ಬಂಡೆಯಲ್ಲಿ ಬರೆದ ಎರಡು ಶಾಸನಗಳು ಪತ್ತೆಯಾಗಿವೆ.
ಪಟ್ಟಣದ ಚೌಡೇಶ್ವರಿ ದೇವಸ್ಥಾನ ಹಾಗೂ ಬೆಟ್ಟದ ಮೇಲಿನ ಚೌಡೇಶ್ವರಿ ದೇವಸ್ಥಾನದಲ್ಲಿ ಈ ಶಾಸನಗಳು ಸಿಕ್ಕಿವೆ. ಇವು ಅಪ್ರಕಟಿತ ಶಾಸನಗಳು ಎಂದು ಶಾಸನ ಸಂಶೋಧಕ ಡಾ.ಚನ್ನಬಸ್ಸಪ್ಪ ವಲ್ಕಂದಿನ್ನಿ ತಿಳಿಸಿದ್ದಾರೆ.
ಎರಡೂ ಶಾಸನಗಳು ಕನ್ನಡ ಲಿಪಿಯಲ್ಲಿವೆ. ಬೆಟ್ಟದ ಚೌಡೇಶ್ವರಿ ದೇವಸ್ಥಾನ ನವರಂಗ ಬಲ ಬದಿಯ ಹೊರಭಿತ್ತಿಯಲ್ಲಿ ಜೋಡಿಸಲಾಗಿದೆ. ಕಪ್ಪು ಶಿಲೆಯಲ್ಲಿ ಇಪ್ಪತ್ತು ಸಾಲುಗಳಿಂದ ರಚಿತಗೊಂಡಿದ್ದು, ಕ್ರಿ.ಶ 1071ರಲ್ಲಿ ಕಲ್ಯಾಣಿ ಚಾಲುಕ್ಯ ಅರಸ ಭುವನೈಕಮಲ್ಲದೇವನ ಕಾಲದಲ್ಲಿ ರಚಿತವಾಗಿದೆ ಎಂದು ಅವರು ತಿಳಿಸಿದ್ದಾರೆ.
ಪಟ್ಟಣದ ಕಲ್ಗುಡಿ ಚೌಡೇಶ್ವರಿ ದೇವಸ್ಥಾನದಲ್ಲಿ ದೊರೆತ ಶಾಸನ ಕ್ರಿ.ಶ 15- 16ನೇ ಶತಮಾನಕ್ಕೆ ಸೇರಿದೆ. ಇದು 9 ಸಾಲುಗಳಿಂದ ರಚಿತಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.