ರಾಯಚೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಡಿಸೆಂಬರ್ ತಿಂಗಳ 26 ದಿನಗಳ ಅವಧಿಯಲ್ಲಿ ಸಂಗ್ರಹವಾದ ದೇಣಿಗೆ ಎಣಿಕೆ ಮಾಡಲಾಗಿದ್ದು, ₹2.95 ಕೋಟಿ ಹಣ ಹಾಗೂ ಚಿನ್ನಾಭರಣ ಸಂಗ್ರಹವಾಗಿದೆ.
₹2,89,63,504 ನಗದು, ₹6,10,500 ಮೊತ್ತದ ನಾಣ್ಯಗಳು ಸೇರಿ ಒಟ್ಟು ₹ 2,95,74,004 ಹಾಗೂ 71 ಗ್ರಾಂ ಚಿನ್ನ, 439 ಗ್ರಾಂ ಬೆಳ್ಳಿ ದೇಣಿಗೆ ರೂಪದಲ್ಲಿ ಬಂದಿದೆ. ಭಕ್ತರಾದ ಚಂದ್ರಿಕಾ ಗೋಕುಲ್ ದಂಪತಿ ಮೂಲ ರಾಮ ದೇವರ ಪೂಜೆಗೆ ಬೆಳ್ಳಿಯ ಎರಡು ದೊಡ್ಡ ಸಮಯಗಳನ್ನು (ದೀಪಮಾಲೆಯ ಕಂಬ) ದೇಣಿಗೆ ನೀಡಿದ್ದಾರೆ. ಮಂತ್ರಾಲಯದ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು ಎರಡು ಸಮಯ ಸ್ವೀಕರಿಸಿ ದೀಪ ಬೆಳಗಿಸಿ ಪೂಜೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.