ADVERTISEMENT

ಮುದಗಲ್ ಪುರಸಭೆ: ತೆರಿಗೆ ವಸೂಲಿಗೆ ತಂಡ ರಚನೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 14:17 IST
Last Updated 22 ಜೂನ್ 2024, 14:17 IST

ಮುದಗಲ್: ಪುರಸಭೆಯಲ್ಲಿ ಬಾಕಿ ಉಳಿದ ತೆರಿಗೆ ವಸೂಲಾತಿಗೆ ಜಿಲ್ಲಾ ಯೋಜನಾಧಿಕಾರಿ ಜಿಲ್ಲಾ ಮಟ್ಟದ ತಂಡ ರಚನೆ ಮಾಡಿ ವಸೂಲಾತಿಗೆ ಮುಂದಾಗಿದ್ದಾರೆ.

ಪುರಸಭೆಯಲ್ಲಿ ತೆರಿಗೆ ವಸೂಲಾತಿ ತುಂಬಾ ಕಡಿಮೆ ಇದೆ. ಈ ವಿಷಯ ಕುರಿತು ಜಿಲ್ಲೆಯಲ್ಲಿ ಸಭೆ ನಡೆಸಿ, ಸಭೆಯಲ್ಲಿ ಮುದಗಲ್ ಪುರಸಭೆ ಕರ ವಸೂಲಿಗರರು ಕುಪ್ಪಣ್ಣ ಹಾಗೂ ಮಾಳಿಂಗರಾಯ ಅವರು ಕರ್ತವ್ಯ ಲೋಪ ಎಸಗಿದ್ದರಿಂದ ತರಾಟೆ ತೆಗೆದುಕೊಂಡಿದ್ದಾರೆ.

ಪುರಸಭೆಯ ವಿವಿಧ ತೆರಿಗೆಗಳಿಗೆ ಸಂಬಂಧಿಸಿದಂತೆ ಬೇಡಿಕೆ, ವಸೂಲಾತಿಯಲ್ಲಿ ನಿರ್ಲಕ್ಷ್ಯ ವಹಿಸಿದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.

ADVERTISEMENT

ಹೊಸ ಪುಸ್ತಕಗಳ ಪ್ರಕಾರ 9434 ಆಸ್ತಿಗಳಿದ್ದು, ಹಳೆ ಬೇಡಿಕೆ ಪುಸ್ತಕ ಪುರಸಭೆಯಲ್ಲಿ ಲಭ್ಯವಿಲ್ಲದ್ದರಿಂದ ಆಕ್ರೋಶಗೊಂಡರು ಎಂದು ತಿಳಿದುಬಂದಿದೆ.

ಮುಖ್ಯಾಧಿಕಾರಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜೂ.24ರಿಂದ ತೆರಿಗೆ ವಸೂಲಾತಿಗೆ ತಂಡಗಳು ಬರಲಿವೆ ಎಂದು ಜಿಲ್ಲಾ ಯೋಜನಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.