ADVERTISEMENT

ಪುರಸಭೆ ಉಪಾಧ್ಯಕ್ಷೆಯಾಗಿ ಸಂತೋಷಿ

​ಪ್ರಜಾವಾಣಿ ವಾರ್ತೆ
Published 1 ಮೇ 2022, 11:43 IST
Last Updated 1 ಮೇ 2022, 11:43 IST
ಮಾನ್ವಿ ಪುರಸಭೆಯ ನೂತನ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದ ಸಂತೋಷಿ ಜಯಪ್ರಕಾಶ್ ಅವರನ್ನು ಪುರಸಭೆಯ ಸದಸ್ಯೆಯರು ಸನ್ಮಾನಿಸಿದರು
ಮಾನ್ವಿ ಪುರಸಭೆಯ ನೂತನ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದ ಸಂತೋಷಿ ಜಯಪ್ರಕಾಶ್ ಅವರನ್ನು ಪುರಸಭೆಯ ಸದಸ್ಯೆಯರು ಸನ್ಮಾನಿಸಿದರು   

ಮಾನ್ವಿ: ಸ್ಥಳೀಯ ಪುರಸಭೆಯ ನೂತನ ಉಪಾಧ್ಯಕ್ಷೆಯಾಗಿ ವಾರ್ಡ್ ನಂ.7ರ ಕಾಂಗ್ರೆಸ್ ಪಕ್ಷದ ಸದಸ್ಯೆ ಸಂತೋಷಿ ಜಯಪ್ರಕಾಶ್ ಶನಿವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪುರಸಭೆಯ ಉಪಾಧ್ಯಕ್ಷರಾಗಿದ್ದ ಕೆ.ಶುಕಮುನಿ ರಾಜೀನಾಮೆಯಿಂದ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಶನಿವಾರ ಚುನಾವಣೆ ನಿಗದಿಗೊಳಿಸಲಾಗಿತ್ತು. ಉಪಾಧ್ಯಕ್ಷೆ ಸ್ಥಾನಕ್ಕೆ ಸದಸ್ಯೆ ಸಂತೋಷಿ ಜಯಪ್ರಕಾಶ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಹಶೀಲ್ದಾರ್ ಚಂದ್ರಕಾಂತ ಘೋಷಿಸಿದರು.

ನಂತರ ಮಾತನಾಡಿದ ನೂತನ ಉಪಾಧ್ಯಕ್ಷೆ ಸಂತೋಷಿ ಜಯಪ್ರಕಾಶ್, ‘ ಪುರಸಭೆಯ ಅಧ್ಯಕ್ಷೆ, ಸರ್ವ ಸದಸ್ಯರು ಹಾಗೂ ಅಧಿಕಾರಿಗಳ ಸಹಕಾರದಿಂದ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಆಧ್ಯತೆ ನೀಡಲಾಗುವುದು’ ಎಂದು ತಿಳಿಸಿದರು. ಪುರಸಭೆ ಅಧ್ಯಕ್ಷೆ ರಶೀದಾ ಬೇಗಂ, ಪುರಸಭೆ ಮುಖ್ಯಾಧಿಕಾರಿ ಗಂಗಾಧರ ಹಾಗೂ ಕಾಂಗ್ರೆಸ್ ಪಕ್ಷದ ಸದಸ್ಯರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.