ADVERTISEMENT

ಪಂಚಮಸಾಲಿ ಮೀಸಲಾತಿಗೆ ಯಡಿಯೂರಪ್ಪ ವಿರೋಧ ಮಾಡುತ್ತಿದ್ದಾರೆ: ವಿಜಯಾನಂದ ಕಾಶಪ್ಪನವರ 

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 13:24 IST
Last Updated 26 ನವೆಂಬರ್ 2022, 13:24 IST
ವಿಜಯಾನಂದ ಕಾಶಪ್ಪನವರ (ಪ್ರಜಾವಾಣಿ ಚಿತ್ರ)
ವಿಜಯಾನಂದ ಕಾಶಪ್ಪನವರ (ಪ್ರಜಾವಾಣಿ ಚಿತ್ರ)   

ಲಿಂಗಸುಗೂರು (ರಾಯಚೂರು): ‘ಪಂಚಮಸಾಲಿ 2(ಎ) ಮೀಸಲಾತಿ ಕಲ್ಪಿಸದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರೋಧಿಸುತ್ತಿದ್ದಾರೆ’ ಎಂದು ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ತಿರುಪತಿಯಲ್ಲಿ ಒಳ ಒಪ್ಪಂದ ಮಾಡಿಕೊಂಡಿರುವ ವಿಷಯ ಗಮನಕ್ಕೆ ಬಂದಿದೆ ಎಂದರು.

ತಿರುಪತಿಯಲ್ಲಿ ಆಗಿರುವ ಮಾತುಕತೆ ಸಂಬಂಧಿಸಿ ಶೀಘ್ರದಲ್ಲಿಯೆ ಅಧಿಕೃತ ಆಡಿಯೊ ಅಥವಾ ವಿಡಿಯೊ ಬಹಿರಂಗ ಪಡಿಸುತ್ತೇವೆ. ಡಿಸೆಂಬರ್ 12ರೊಳಗಡೆ ಮೀಸಲಾತಿ ಘೋಷಿಸದೆ ಹೋದಲ್ಲಿ ಯಡಿಯೂರಪ್ಪ ವಿರುದ್ದವೆ ರಾಜ್ಯವ್ಯಾಪಿ ಪ್ರತ್ಯೇಕ ಹೋರಾಟ ರೂಪಿಸಲಾಗುವುದು ಎಂದರು.

ADVERTISEMENT

ತಾವು ಎರಡನೇ ಮದುವೆ ಆಗುತ್ತಿದ್ದೀರಿ ಎನ್ನುವ ಸುದ್ದಿ ಹರಿದಾಡುತ್ತಿದೆ ಎಂದು ಕೇಳಿದ ಪ್ರಶ್ನೆಗೆ, ‘ಇದು ಕಪೊಕಲ್ಪಿತ ವಿಷಯ. ವದಂತಿಗಳಿಗೆ ಕಿವಿಗೊಡದಿರಿ. ದಯವಿಟ್ಟು ವೈಯಕ್ತಿಕ ವಿಷಯಗಳ ಮೇಲೆ ಬೆಳಕು ಚೆಲ್ಲದಿರಿ’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.